17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮಕ್ಕೆ ಜಿಲ್ಲೆ ಸಜ್ಜಾಗಿದೆ. ಎರಡು ದಿನಗಳ ಕಾಲ ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಅಕ್ಷರ ಜಾತ್ರೆ ನಡೆಯಲಿದೆ.
ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.
ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ಗಾಜಿನಮನೆಯಲ್ಲಿ ವೇದಿಕೆಯೂ ಸಿಂಗಾರಗೊಂಡಿದೆ. ಡಿ. 29 ಮತ್ತು 30ರಂದು ಹಲವು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಸಾಹಿತ್ಯ ಶ್ರೀ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುತ್ತದೆ.

29ರಂದು ರಾಷ್ಟ್ರಕವಿ ಕುವೆಂಪು ಜನ್ಮ ದಿನವಾಗಿದ್ದು, ಪ್ರಧಾನ ವೇದಿಕೆಯಲ್ಲಿ ವಿಶ್ವಮಾನವ ದಿನ ಆಚರಿಸಲಾಗುತ್ತದೆ. ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಕುವೆಂಪು ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುಖಾಂತರ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಸಾಹಿತ್ಯಾಸಕ್ತರು, ಕಾಲೇಜು ವಿದ್ಯಾರ್ಥಿಗಳು, ಎನ್‍ಸಿಸಿ, ಎನ್‍ಎಸ್‍ಎಸ್‌ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಕೋಲಾಟ, ನಂದಿಧ್ವಜ, ವೀರಗಾಸೆ ಸೇರಿ 32 ಕಲಾ ತಂಡಗಳು ಭಾಗವಹಿಸಲಿವೆ.

ಗಾಜಿನಮನೆಯಲ್ಲಿ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಹಲವು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಸಮ್ಮೇಳನದಲ್ಲಿ ಇಂದು ಧ್ವಜಾರೋಹಣ- ಎನ್‌.ತಿಪ್ಪೇಸ್ವಾಮಿ ಪಿ.ಎಸ್‌.ರಾಜೇಶ್ವರಿ ಕೆ.ಎಸ್‌.ಸಿದ್ಧಲಿಂಗಪ್ಪ. ಸ್ಥಳ- ಗಾಜಿನಮನೆ ಅಮಾನಿಕೆರೆ. ಬೆಳಿಗ್ಗೆ 7.30

ಸಮ್ಮೇಳನ ಅಧ್ಯಕ್ಷರ ಮೆರವಣಿಗೆ: ಉದ್ಘಾಟನೆ- ಸಿ.ಯೋಗಾನಂದ. ಅತಿಥಿ- ಬಾಲಗುರುಮೂರ್ತಿ ಲಕ್ಷ್ಮಿನರಸಯ್ಯ ಈಶ್ವರ್‌ ಕು.ಮಿರ್ಜಿ. ಸ್ಥಳ- ಟೌನ್‌ಹಾಲ್‌ ವೃತ್ತ. ಬೆಳಿಗ್ಗೆ 8

ಸಮ್ಮೇಳನದ ಉದ್ಘಾಟನಾ ಸಮಾರಂಭ: ಸಾನ್ನಿಧ್ಯ- ಕಾರದ ವೀರಬಸವ ಸ್ವಾಮೀಜಿ. ಉದ್ಘಾಟನೆ- ಜಿ.ಪರಮೇಶ್ವರ. ಆಶಯ ನುಡಿ- ಕೆ.ಎಸ್‌.ಸಿದ್ಧಲಿಂಗಪ್ಪ. ‘ಕಲ್ಪ ಸುಧೆ’ ನೆನಪಿನ ಸಂಚಿಕೆ ಬಿಡುಗಡೆ- ಟಿ.ಬಿ.ಜಯಚಂದ್ರ. ಧ್ವಜ ಹಸ್ತಾಂತರ- ಅಗ್ರಹಾರ ಕೃಷ್ಣಮೂರ್ತಿ. ಧ್ವಜ ಸ್ವೀಕಾರ- ಸಮ್ಮೇಳನ ಅಧ್ಯಕ್ಷ ಕರೀಗೌಡ ಬೀಚನಹಳ್ಳಿ. ಅಧ್ಯಕ್ಷತೆ- ಜಿ.ಬಿ.ಜ್ಯೋತಿಗಣೇಶ್‌. ಕೃತಿಗಳ ಬಿಡುಗಡೆ- ಎಸ್‌.ಆರ್‌.ಶ್ರೀನಿವಾಸ್‌ ಕೆ.ಷಡಕ್ಷರಿ ಸಿ.ಬಿ.ಸುರೇಶ್‌ಬಾಬು ಎಚ್‌.ಡಿ.ರಂಗನಾಥ್‌ ಆರ್‌.ರಾಜೇಂದ್ರ. ಸ್ಥಳ- ಗಾಜಿನಮನೆ. ಬೆಳಿಗ್ಗೆ 10

ಪುಸ್ತಕ ಮಳಿಗೆ ಚಿತ್ರಕಲೆ ಕರಕುಶಲ ವಸ್ತು ಪ್ರದರ್ಶನ ಉದ್ಘಾಟನೆ- ಶುಭ ಕಲ್ಯಾಣ್‌ ಜಿ.ಪ್ರಭು ಕೆ.ವಿ.ಅಶೋಕ್‌. ಬೆಳಿಗ್ಗೆ 10

ಗೋಷ್ಠಿ-1: ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ. ಅತಿಥಿ- ಎಸ್‌.ಆರ್‌.ವಿಜಯಶಂಕರ ಎಸ್‌.ಚಂದ್ರಶೇಖರ್‌ ಎಚ್‌.ದಂಡಪ್ಪ ಶಿವಣ್ಣ ಬೆಳವಾಡಿ ಬಾ.ಹ.ರಮಾಕುಮಾರಿ. 12.45.

ಗೋಷ್ಠಿ-2: ದಲಿತ ಸಾಹಿತ್ಯ ಐವತ್ತು – ಬಂಡಾಯ ನಲವತ್ತಾರು‌. ವಿಷಯ ಮಂಡನೆ- ಕೊಟ್ಟ ಶಂಕರ್ ಬಿ.ಎಸ್.ಮಂಜುಳಾ ರವಿಕುಮಾರ್ ನೀಹ. ಆಶಯ ನುಡಿ- ಬಾಲಗುರುಮೂರ್ತಿ. ಅಧ್ಯಕ್ಷತೆ- ತುಂಬಾಡಿ ರಾಮಯ್ಯ. ಮಧ್ಯಾಹ್ನ 2

ಗೋಷ್ಠಿ-3: ಕವಿಗೋಷ್ಠಿ. ಆಶಯ ನುಡಿ- ಎನ್.ತಿಪ್ಪೇಸ್ವಾಮಿ. ಅಧ್ಯಕ್ಷತೆ- ವಡ್ಡಗೆರೆ ನಾಗರಾಜಯ್ಯ. ಭಾಗವಹಿಸುವ ಕವಿಗಳು- ಎಚ್.ಪಿ.ವೆಂಕಟಾಚಲ ಚೆನ್ನಕೇಶವಮೂರ್ತಿ ಚಂದ್ರಶೇಖರ ಪ್ರಸಾದ್‌ ಬ್ಯಾಡನೂರು ನಾಗಭೂಷಣ ಮೇಘಾ ರಾಮದಾಸ್ ಎಂ.ಜಿ.ಧನಂಜಯ ದೇವರಮನೆ ದ್ವಾರನಕುಂಟೆ ಲಕ್ಷ್ಮಣ್ ದಾದಾಪೀರ್ ಗುಬ್ಬಚ್ಚಿ ಸತೀಶ್ ಬಿ.ಕೆ.ಮುನಿಸ್ವಾಮಿ ಮಹೇಶ್ ಗೌಡನಕಟ್ಟೆ ತಂ.ಪಾ.ಚಂದ್ರಕೀರ್ತಿ ಎಂ.ವಿ.ಶಂಕರಾನಂದ ನಿಡಸಾಲೆ ಪ್ರಸಾದ್ ಕೋಮಲಾ ಕಂಟಲಗೆರೆ ಡಿ.ನಳಿನಾ ಹರೀಶ್ ಸಿಂಗ್ರಿಹಳ್ಳಿ ಎ.ಭಾರತಿ ಸಣ್ಣರಂಗಮ್ಮ ಗರಣಿ ಮಂಜು ತರಂಗಿಣಿ ಮೇ.ನ ಅಬ್ಬಿನಹೊಳೆ ಸುರೇಶ್ ಅನಿಲ್‌ಕುಮಾರ್ ಮಾಳೋದೆ‌ ರಂಗರಾಜು. ಮಧ್ಯಾಹ್ನ 3.45

ಗೋಷ್ಠಿ-4: ಗೌರವ ಸನ್ಮಾನ. ಅಧ್ಯಕ್ಷತೆ- ಚ.ಹ.ರಘುನಾಥ್. ಸಂಜೆ 5.30. ಸಾಂಸ್ಕೃತಿಕ ಕಾರ್ಯಕ್ರಮ. ಉದ್ಘಾಟನೆ- ಲಕ್ಷ್ಮಣದಾಸ್. ಅತಿಥಿ- ಈಶ್ವರಯ್ಯ ಸಂಜೀವಪ್ಪ ಎಂ.ವಿ.ನಾಗಣ್ಣ ವೀರೇಶ್ ಪ್ರಸಾದ್. ಅಧ್ಯಕ್ಷತೆ- ಕೆ.ಸಿ.ನರಸಿಂಹಮೂರ್ತಿ

Leave a Reply

Your email address will not be published. Required fields are marked *