ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಗಳು ಇಂದಿನ ದಿನಮಾನಗಳಲ್ಲಿ ಪ್ರಚಾರ ಪಡೆಯುವುದು ಹಾಗೂ ಪ್ರಸಿದ್ದಿ ಹೊಂದುವುದು ಆಗಿದೆ. ಆದರೆ ಯಶಸ್ವಿಯಾಗಿ ಜನಮಾನಸದಲ್ಲಿ ನಿರಂತರ ಬದಲಾವಣೆಗಳಿಗಾಗಿ ನಿಸ್ವಾರ್ಥ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಗಳಿಂದ ಯಶಸ್ವಿ ಕಾರ್ಯಕ್ರಮಗಳಾಗುತ್ತವೆ ಎಂದು ಬ್ರಾಹ್ಮಣ ಸಮಾಜದ ಮುಖಂಡರಾದ ದೋಟಿಹಾಳ ವೇಂಕಣ್ಣಾಚಾರ್ಯ ಜೋಷಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಿಂಧನೂರು ನಗರದ ಉಪ್ಪಾರವಾಡಿಯ ವಸಿಷ್ಠಧಾಮದಲ್ಲಿ 2026 ಹೊಸ ಕ್ಯಾಲೆಂಡರ್ ಬಿಡುಗಡೆ ವಶಿಷ್ಠಧಾಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ ವಶಿಷ್ಠಧಾಮ ಬ್ರಾಹ್ಮಣ ಸಮಾಜದ ಹೆಮ್ಮೆಯ ಸಂಸ್ಥೆಯಾಗಿದೆ. ಚಿಕ್ಕಮಕ್ಕಳಿಗೆ ಆಟಪಾಠ ನೀತಿಕಥೆಗಳನ್ನು ಹೇಳುವ ಮೂಲಕ ನಿರಂತರ ಕಾರ್ಯಚಟುವಟಿಕೆ ನಡೆಸುವಲ್ಲಿ ವಶಿಷ್ಯಧಾಮ ಸಮಾಜದಲ್ಲಿ ಮುಖ್ಯಪಾತ್ರ ವಹಿಸಿದೆ ಎಂದರು.
ವಶಿಷ್ಠಧಾಮ ಸೇವಾಟ್ರಸ್ಟ್ ಅಧ್ಯಕ್ಷರಾದ ಭೀಮಸೇನಾಚಾರ್ಯ ನವಲಿ ಮಾತನಾಡಿ ಮಕ್ಕಳಿಗೆ ಜ್ಞಾನಶಕ್ತಿ. ಇಚ್ಛಾಶಕ್ತಿ ಹಾಗೂ ಕ್ರೀಯಾಶಕ್ತಿಯಿಂದ ಮಕ್ಕಳಲ್ಲಿ ಒಳ್ಳೆಯ ಮನಸ್ಸು ಬರುತ್ತದೆ. ಒಳ್ಳೆಯ ವಿಚಾರಗಳು ಮನಸ್ಸಿಗೆ ಹಾಕಿದರೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಬಹುದಾಗಿದೆ ಇದರಿಂದ ಸಮಾಜದಲ್ಲಿ ವಿಶೇಷ ವ್ಯಕ್ತಿಗಳಾಗಿ ರಾಷ್ಟ್ರಕ್ಕೆ ಸೇವೆಯನ್ನು ಸಲ್ಲಿಸಬಹುದಾಗಿದೆ ಎಂದರು.
ಸಾವಯವ ಕೃಷಿಕರಾದ ಬಸ್ಸಪ್ಪ ಅಯ್ಯಪ್ಪ ವಂಕಲಕುಂಟಿ ಕೊಪ್ಪಳ ಇವರಿಗೆ ವಶಿಷ್ಠಧಾಮ ಕೃಷಿರತ್ನಾಕರ, ದಾಸಸಾಹಿತ್ಯ ನಿರಂತರ ಪ್ರಚಾರಮಾಡುವ ಸಂಪದಾ ಕುಲಕರ್ಣೀ ಸಿದ್ಧಾಂಪುರ ಇವರಿಗೆ ವಶಿಷ್ಠಧಾಮ ಹರಿದಾಸರತ್ನ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಸೇವೆಯನ್ನು ಮಾಡುತ್ತಿರುವ ಹನುಮೇಶ ಜಾಗೀರದಾರ ಅವರಿಗೆ ವಶಿಷ್ಠಧಾಮ ವಿಪ್ರಯುವರತ್ನ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೃಷಿಕ ಬಸ್ಸಪ್ಪ ಅಯ್ಯಪ್ಪ ಮಾತನಾಡಿ ಇಂದು ನಾವು ಊಟಮಾಡುವ ಪದಾರ್ಥಗಳು ವಿಷಮಯವಾಗಿದೆ. ನಾನು ಸಂಪೂರ್ಣ ಸಾವಯವ ಗೊಬ್ಬರದಿಂದ ಹೊಲದಲ್ಲಿ ಅನೇಕ ರೀತಿಯ ಬೆಳೆಗಳನ್ನು ಬೆಳೆದು ರಾಜ್ಯಮಟ್ಟದ ರಾಷ್ಟ್ರಮಟ್ಟದ ಹಾಗೂ ವಿದೇಶಗಳಲ್ಲಿ ನನ್ನ ಅನುಭವಗಳನ್ನು ತಿಳಿಸುವ ಮೂಲಕ ಅನೇಕ ರೈತರಿಗೆ ಮಾದರಿಯಾಗಿದ್ದೇನೆ ಎಂದರು.
ಸಂಪದಾ ಕುಲಕರ್ಣಿ ಹಾಗೂ ಹನುಮೇಶ ಜಾಹಗೀರದಾರ ಮಾತನಾಡಿ ವಶಿಷ್ಠಧಾಮ ಪ್ರಶಸ್ತಿಯಿಂದ ನಮಗೆ ಸಮಾಜದಲ್ಲಿ ಸೇವೆ ಸಲ್ಲಿಸಲು ಪ್ರೇರಣೆಯಾಗಿದೆ ಎಂದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಗೋವಿಂದರಾವ ಕುಲಕರ್ಣಿ, ವೆಂಕಟರಾವ್ ರಾಜು ಬಂಡಿ, ಪ್ರಭಾಕರ ಕುಲಕರ್ಣಿ, ಪಾಂಡುರಂಗ ದೇಸಾಯಿ ಹಾಗೂ ಗುರುರಾಜ ಕುಲಕರ್ಣಿ ಕಾರ್ಯಕ್ರಮದ ಕುರಿತು ಮಾತನಾಡಿದರು. ಪ್ರಹ್ಲಾದ ಕುಲಕರ್ಣಿ, ಶರಣಬಸವ ಮಸ್ಕಿ, ಸಣ್ಣಮಲ್ಲಪ್ಪ ಮಾಡಗಿರಿ, ಶಂಕರಸಾ ಕಾಟವ, ಜಯತೀರ್ಥದಾಸ, ಬಸವರಾಜ ನಿಪ್ಪಾಣಿ, ಶ್ರೀನಿವಾಸ ಹೊಗಿಬಂಡಿ, ರಮಾಕಾಂತ ಪುರೋಹಿತ, ಭೀಮಸೇನ ಜಾಹಗೀರದಾರ ಉಪಸ್ಥಿತರಿದ್ದರು. ವಶಿಷ್ಠಧಾಮದ ಸತ್ಯನಾರಾಯಣಾಚಾರ್ಯ ನವಲಿ, ಭಾರದ್ವಾಜ ಉಪ್ಪಳ, ಶೋಭಾ ನವಲಿ ಹಾಗೂ ಅ೦ಜನಾ ನವಲಿ ಅತಿಥಿಗಳಿಗೆ ಪುಷ್ಪ ಸಮರ್ಪಣೆ ಮೂಲಕ ಸ್ವಾಗತಿಸಿದರು. ಸಾವಿತ್ರಿ ದೀಕ್ಷಿತ್ ವಶಿಷ್ಠಧಾಮ ಗುರುಕುಲ ಮಕ್ಕಳಿಗೆ ಹಾಡು ನೃತ್ಯ ಸಾಂಸಕೃತಿಕ ಕಾರ್ಯಕ್ರಮಗಳು ಜರುಗಿಸುವ ಮೂಲಕ ಕಾರ್ಯಕ್ರಮ ನಿರೂಪಿಸಿದರು. ಸಹನಾ ಪೂಜಾರಿ ಪ್ರಾರ್ಥನಾ ಗೀತೆ ಹಾಡಿದರು.

