ಬಾಗಲಕೋಟೆ : ಗಾಯಕಿ ಅನಘಾ ಪಾಟೀಲ ಅವರಿಂದ ವಚನ ನಮನ, ಸಾಧಕರಿಗೆ, ಭಾರತೀಯ ರಕ್ಷಣಾ ಪಡೆ ನಿವೃತ್ತ ಯೋಧರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಬಾಗಲಕೋಟೆ: ಕುದರಿಕನ್ನೂರ ಲೇಔಟ್‌ನಲ್ಲಿ ಜ.4ರಂದು ಸಂಜೆ 5ಕ್ಕೆ ವಚನ ರಕ್ಷಕ ಗೆಳೆಯರ ಬಳಗದ ವತಿಯಿಂದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗೆ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲು ಬಳಗದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಜ.2ರಂದು ಬೆಳಿಗ್ಗೆ 6ಕ್ಕೆ ವಿದ್ಯಾಗಿರಿ ಬಸ್ ನಿಲ್ಧಾನದಿಂದ ಪ್ರಮುಖ ರಸ್ತೆಗಳಲ್ಲಿ ಸದ್ಭಾವನಾ ನಡಿಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾಗಿರಿಯ ಕನ್ನೂರು ಹಿರೇಮಠದ ವಿಶ್ವರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಾದಾಮಿಯ ಜಿ.ಜಿ. ಹಿರೇಮಠ ಉಪನ್ಯಾಸ ನೀಡಲಿದ್ದಾರೆ.

ಜ್ಞಾನಯೋಗಾಶ್ರಮದ ಹರ್ಷಾನಂದ ಸ್ವಾಮೀಜಿ, ಶಿವಾನಂದ ಮಠದ ಗುರುಪ್ರಸಾದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ರಾಜು ಗಡ್ಡಿ ಅವರ ‘ಖಾಲಿ ಕೊಡಗಳು’ ಕಾದಂಬರಿ ಬಿಡುಗಡೆ ಮಾಡಲಾಗುವುದು.

ಎಸ್.ಎ.ಡೆಂಗಿ, ಎಸ್.ಎಚ್.ತೆಗ್ಗಿ, ಶಿವಾನಂದ ಕುಂಬಾರ, ಐ.ಎಂ. ಗೌಡರ, ಡಾ. ರವಿ ಕೋಟೆಣ್ಣವರ, ಶಿವಲಿಂಗಪ್ಪ ಕುದರಿಕನ್ನೂರ, ಶಶಿಧರ ಹಂಜಿ, ಬಸವರಾಜ ಹೂಲಗೇರಿ, ಎಚ್.ಡಿ.ಹೊಸಮನಿ, ಮುತ್ತು ಮಡಿವಾಳರ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *