ಸಿಂಧನೂರು : ನಗರದ ಹಳೆ ಐ.ಬಿ ಜಾಗವನ್ನು ನ್ಯಾಯಾಲಯದ ಕಟ್ಟಡ, ನ್ಯಾಯಾಧೀಶರ ವಸತಿಗೃಹ ಹಾಗೂ ವಾಹನ ಪಾರ್ಕಿಂಗ್ ಅನುಕೂಲಕ್ಕಾಗಿ ಒದಗಿಸುವುದು ಮತ್ತು ವಕೀಲರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ತಾಲೂಕು ನ್ಯಾಯವಾದಿಗಳ ಸಂಘದ ವತಿಯಿಂದ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಕ್ಷಿದಾರರಿಗೆ, ವಕೀಲರಿಗೆ ಜಾಗದ ಕೊರತೆ
ಸ್ಥಳೀಯವಾಗಿ 5 ಕೋರ್ಟ್ಗಳು ಕಾರ್ಯ ನಿರ್ವಹಿಸುತ್ತಿದ್ದು, ವಕೀಲರ ಸಂಘದಲ್ಲಿ 500 ವಕೀಲರು ಇದ್ದು, ವಕೀಲರಿಗೆ ಸುಸಜ್ಜಿತವಾದ ವಕೀಲರ ಭವನ ಇರುವುದಿಲ್ಲ. ಈಗಿರುವ ಕೋರ್ಟ್ಗಳಲ್ಲಿ ಸುಮಾರು 7000ರಿಂದ 8000 ಪ್ರಕರಣಗಳು ಬಾಕಿ ಇರುತ್ತವೆ. ಎಲ್ಲಾ ವಕೀಲರು ಮತ್ತು ಕಕ್ಷಿದಾರರು ತಮ್ಮ ವಾಹನಗಳನ್ನು ಕೋರ್ಟಿಗೆ ತೆಗೆದುಕೊಂಡು ಬರುತ್ತಾರೆ. ಇದರಿಂದಾಗಿ ವಾಹನ ನಿಲ್ಲಿಸಲು, ಕಕ್ಷಿದಾರರಿಗೆ ವಿಶ್ರಾಂತಿ ತೆಗೆದುಕೊಳ್ಳಲು ನ್ಯಾಯಾಲಯದ ಆವರಣದಲ್ಲಿ ಜಾಗದ ಕೊರತೆ ಇರುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಹಳೆ ಐಬಿ ಜಾಗೆ ನೀಡಲು ಮನವಿ
ನ್ಯಾಯಾಲಯದ ಆವರಣದ ದಕ್ಷಿಣ ದಿಕ್ಕಿಗೆ ಸ.ನಂ 767// *ರಲ್ಲಿ ಹಳೆ ಐ.ಬಿ ಜಾಗವಿದ್ದು, ಈ ಜಾಗವು ನ್ಯಾಯಲಯಕ್ಕೆ ಹೊಂದಿಕೊಂಡಿರುವುದರಿAದ ವಿವಿಧ ಉದ್ದೇಶದ ಸಲುವಾಗಿ ಬಿಟ್ಟುಕೊಟ್ಟರೆ, ಅನುಕೂಲ ವಾಗುತ್ತದೆ. ಲೋಕೋಪಯೋಗಿ ಇಲಾಖೆ ಸಂಬಂಧಿಸಿದ ಸ.ನಂ: 767// * ವಿಸ್ತೀರ್ಣ 02 ಎಕರೆ 22 ಗುಂಟೆ ಪೈಕಿ 01 ಎಕರೆ 10 ಗುಂಟೆ ನ್ಯಾಯಾಲಯದ ಸಲುವಾಗಿ ಬಿಟ್ಟುಕೊಟ್ಟರೆ, ಜಿಲ್ಲಾ ನ್ಯಾಯಲಯ ಕಟ್ಟಡ ಕಟ್ಟಲು, ವಾಹನ ನಿಲ್ಲಿಸಲು ಹಾಗೂ ನ್ಯಾಯದೀಶರ ವಸತಿಗೃಹ ಕಟ್ಟಡ ನಿರ್ಮಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಕುರಿತು ಸಂಬAದಪಟ್ಟ ಇಲಾಖೆಗೆ ಆದೇಶಿಸಿ ಕ್ರಮ ಕೈಗೊಳ್ಳಬೇಕು” ಎಂದು ಮನವಿಯಲ್ಲಿ ತಿಳಿಸಲಾಗಿದೆ
ವಕೀಲರ ಸಂಘದಲ್ಲಿ 500 ವಕೀಲರು ಇದ್ದು, ಹಿರಿಯ, ಕಿರಿಯ, ಮಹಿಳಾ ನ್ಯಾಯವಾದಿಗಳು ಸಕ್ರಿಯವಾಗಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ವಕೀಲರಿಗೆ ಸುಸಜ್ಜಿತವಾದ ವಕೀಲರ ಭವನ ಇರುವುದಿಲ್ಲ. ವಕೀಲರ ಭವನದ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಕರ್ನಾಟಕ ಸರಕಾರಕ್ಕೆ ಮಾನ್ಯ ಹೈಕೋರ್ಟ್ ಬೆಂಗಳೂರು ಸರ್ಕಾರಕ್ಕೆ ಪತ್ರಗಳನ್ನು ಕಳುಹಿಸಿದ್ದು, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಹಾಗಾಗಿ ಕೂಡಲೇ ಅನುದಾನ ಬಿಡುಗಡೆ ಮಾಡಿಸಿ ವಕೀಲರ ಭವನ ನಿರ್ಮಿಸಿಕೊಡಬೇಕು ಎಂದು ತಾಲೂಕು ನ್ಯಾಯವಾದಿಗಳ ಸಂಘದವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಹಿರಿಯ ವಕೀಲರಾದ ಎಂ.ಕಾಳಿಂಗಪ್ಪ, ಕೆ.ಅಮರೇಗೌಡ, ವಕೀಲರಾದ ನಿರುಪಾದೆಪ್ಪ ಗುಡಿಹಾಳ, ಖಾಜಿಮಲಿಕ್, ಭೀಮರಾಯ, ಬಸವರಾಜ, ಬಾಬರ್‌ಪಾಷಾ, ಆರ್.ಕೆ.ನಾಗರಾಜ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಇದ್ದರು.

Leave a Reply

Your email address will not be published. Required fields are marked *