ತಾಳಿಕೋಟಿ: ಪಟ್ಟಣದ ಮುಸ್ಲಿಂ ಸಮಾಜದ ಮುಖಂಡ,ಈದಗಾ ಸಮಿತಿ ಮಾಜಿ ಅಧ್ಯಕ್ಷ ಖಾಜಾಹುಸೇನ ಮಶಾಕಸಾಬ ಡೋಣಿ(70) ಬುಧವಾರ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ(ಬುಧವಾರ) ಮುಂಜಾನೆ 9 ಘಂಟೆಗೆ ಟಿಪ್ಪು ನಗರದ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೇಳೆದರು. ಮೃತರು ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂದು ಬಳಗ ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಬುಧವಾರ(ಡಿ.24) ಸಂಜೆ 5:00 ಘಂಟೆಗೆ ಸ್ಥಳೀಯ ಖಬರ ಸ್ಥಾನದಲ್ಲಿ ನೆರವೇರಿತು. ಶಾಸಕ ನಾಡಗೌಡರಿಂದ ಸಂತಾಪ: ಮುಸ್ಲಿಂ ಸಮಾಜದ ಮುಖಂಡರಾದ ಖಾಜಾ ಹುಸೇನ ಡೋಣಿ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ವಾರ್ಡ್ ಮಟ್ಟದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಶಾಸಕ ಅಪ್ಪಾಜಿ ನಾಡಗೌಡರು ಕಾರ್ಯಕ್ರಮ ಸ್ಥಗಿತಗೊಳಿಸಿ ಮನೆಗೆ ಭೇಟಿ ನೀಡಿ ಡೋಣಿಯವರ ಪಾರ್ಥಿವ ಶರೀರದ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿ ಅವರ ಆತ್ಮಕ್ಕೆ ಭಗವಂತನಲ್ಲಿ ಶಾಂತಿ ಕೋರಿದರು.

