ಸಿಂಧನೂರು : ನಗರದ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಕ್ರಿಸ್‌ಮಸ್ ಈವ್ ಪವಿತ್ರ ಬಲಿ ಪೂಜೆ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಪವಿತ್ರ ಮಸ್ಸಾವನ್ನು ರೆವರೆಂಟ್ ಫಾದರ್ ಜ್ಞಾನ ಪ್ರಕಾಶ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ಯಾರಿಷ್ ಕೌನ್ಸಿಲ್ ಸದಸ್ಯರು, ಚರ್ಚ್ ಸಮಿತಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಿಷ್ ಸದಸ್ಯರು ಭಾಗವಹಿಸಿದ್ದರು.

ಪ್ರಸಂಗದಲ್ಲಿ ಫಾದರ್ ಗ್ನಾನ ಪ್ರಕಾಶ್ ಅವರು ಯೇಸು ಕ್ರಿಸ್ತರ ಜನನದ ಮಹತ್ವವನ್ನು ವಿವರಿಸಿ, ಪ್ರೀತಿ, ಶಾಂತಿ, ತ್ಯಾಗ, ಕ್ಷಮೆ ಹಾಗೂ ಸಹೋದರತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಸಮಾಜದಲ್ಲಿ ಶಾಂತಿ, ಏಕತೆ ಮತ್ತು ಮಾನವೀಯತೆಯನ್ನು ಬೆಳೆಸುವಲ್ಲಿ ಕ್ರಿಸ್‌ಮಸ್ ಹಬ್ಬದ ಸಂದೇಶ ಅತ್ಯಂತ ಮಹತ್ವದ್ದೆಂದು ಅವರು ಹೇಳಿದರು.

ಪವಿತ್ರ ಬಲಿ ಪೂಜೆ ಸಂದರ್ಭದಲ್ಲಿ ಕ್ರಿಸ್‌ಮಸ್ ಕೀರ್ತನೆಗಳು, ಬೈಬಲ್ ವಾಚನಗಳು ಮತ್ತು ವಿಶೇಷ ಪ್ರಾರ್ಥನೆಗಳು ನೆರವೇರಿದ್ದು, ಚರ್ಚ್ ವಾತಾವರಣವು ಸಂಪೂರ್ಣವಾಗಿ ಆಧ್ಯಾತ್ಮಿಕತೆಯಿಂದ ತುಂಬಿತ್ತು. ಪ್ಯಾರಿಷ್ ಕೌನ್ಸಿಲ್ ಸದಸ್ಯರು ಕಾರ್ಯಕ್ರಮದ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಿದರು.

ಮಸ್ಸಾ ನಂತರ ಪ್ಯಾರಿಷ್ ಸದಸ್ಯರು ಪರಸ್ಪರ ಕ್ರಿಸ್‌ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಪ್ರೀತಿ ಮತ್ತು ಐಕ್ಯತೆಯ ವಾತಾವರಣವನ್ನು ನಿರ್ಮಿಸಿದರು. ಈ ಕ್ರಿಸ್‌ಮಸ್ ಈವ್ ಆಚರಣೆ ವಿಶ್ವ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಮೂಲಕ ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *