ತಾಳಿಕೋಟೆ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ತ್ರೈಮಾಸಿಕ ಕೆಡಿಪಿ ಸಭೆಯು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ವಿವಿದ ಿಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದ ವರು ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಗಳಂತೆ ಎಲ್ಲ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಇಲಾಖಾವಾರು ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸಿ ಜನಸ್ನೇಹಿ ಅಧಿಕಾರ ಹೊಂದಬೇಕು. ಎಂದು ಹೇಳಿದರು ಸಾರ್ವಜನಿಕರ ಕುಂದು-ಕೊರತೆ, ಸಮಸ್ಯೆಗಳಿಗೆ ನ್ಯಾಯಸಮ್ಮತ ಪರಿಹಾರ ಹುಡುಕಿ ಸುಧಾರಣೆ ಕ್ರಮ ಕೈಗೊಂಡು ಕ್ಷೇತ್ರದ ಪ್ರಗತಿಗೆ ಬದ್ಧರಾಗಬೇಕು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲು ಸುಧಾರಿತ ಕ್ರಮ ಕೈಗೊಳ್ಳಬೇಕು. ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಮೂಲಸೌಲಭ್ಯಗಳನ್ನು ನೀಡುವಲ್ಲಿ ನಿಗಧಿತ ಯೋಜನೆಗಳನ್ನು ರೂಪಿಸಬೇಕು. ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಿ ಮತಕ್ಷೇತ್ರದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಿ ಎಂದರು.
ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಲಭ್ಯವಾಗುವ ಬೀಜ, ರಸಗೊಬ್ಬರ, ಔಷಧಗಳ ಸಂಗ್ರಹ ಮತ್ತು ವಿತರಣೆ ಬಗ್ಗೆ ಮಾಹಿತಿ ಪಡೆದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ, ಮೊರಾರ್ಜಿ ದೇಸಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಬಗ್ಗೆ ಚರ್ಚಿಸಿದ ಮಾನ್ಯರು, ವಸತಿ ನಿಲಯಗಳ ಪ್ರವೇಶಾತಿ, ಮಕ್ಕಳ ಹಾಜರಾತಿ ಕುರಿತು ಪರಿಶೀಲಿಸಿದರು. ಮಕ್ಕಳಿಗೆ ಸಕಾಲದಲ್ಲಿ ಊಟ-ಉಪಹಾರ ವಿತರಿಸಬೇಕು. ಶೇ.100 ಫಲಿತಾಂಶ ಹೊಂದಲು ಶೈಕ್ಷಣಿಕ ಕ್ರಮ ಕೈಗೊಳ್ಳಿ. ಹೊಸ ವಸತಿ ನಿಲಯಗಳಿಗೆ ಜಾಗ ಮಂಜೂರಾತಿ ನೀಡಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಪ್ರಗತಿ ಕುರಿತು ಮಾನ್ಯ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಭೆಗೆ ಹಾಜರಾಗಿ ಪ್ರಗತಿ ವರದಿಯನ್ನು ಮಂಡಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ತಾಳಿಕೋಟೆ ತಾ.ಪಂ. ಇಓ ಅನುಸೂಯಾ ಚಲವಾದಿ, ಮುದ್ದೇಬಿಹಾಳ ತಾ.ಪಂ. ಇಓ ವೆಂಕಟೇಶ ವಂದಾಲ ತಹಶೀಲ್ದಾರರಾದ ಕೀರ್ತಿ ಚಾಲಕ ಮತ್ತು ಡಾ.ವಿನಯಾ ಹೂಗಾರ, ಬಿಇಓ ಬಿ.ಎಸ್.ಸಾವಳಗಿ, ಸಿಪಿಐ, ತಾಲ್ಲೂಕಾ ಆರೋಗ್ಯಾಧಿಕಾರಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಸೇರಿದಂತೆ ತಾಲ್ಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳಿದ್ದರು.
