ಕೊಡೇಕಲ್ಲ: ನಾಡಿನಲ್ಲಿ ಸೌಹಾರ್ದತೆ ಸಹಬಾಳ್ವೆ ಹಾಗೂ ಸಮಾನತೆಗೆ ಹೆಸರುವಾಸಿ ಆದಂತಹ ಪರಮಪೂಜ್ಯ ಶ್ರೀ ಬಸವರಾಜಯ್ಯ ಅಪ್ಪನವರ 11ನೇ ಪುಣ್ಯಾರಾಧನೆ ಅಂಗವಾಗಿ ಇಂದು ದಿನಾಂಕ 24 12 2025 ಬುಧವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ನಿಜಲಿಂಗೇಶ್ವರ ಮಠದ ಆವರಣದಲ್ಲಿ ಧರ್ಮಸಭೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಚಿಂತಕರಾದ ಶ್ರೀ ಅಕ್ಬರ್ ಅಲಿ ಉಡುಪಿ ರವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ . ಕೊಡೆಕಲ್ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

