ತಾಳಿಕೋಟೆ: ಪಟ್ಟಣದಲ್ಲಿ ಟ್ರೀ ಪಾರ್ಕ್( ಸಸ್ಯೋದ್ಯಾನ) ನಿರ್ಮಾಣ ಹಾಗೂ ಉದ್ಯಾನಗಳ ಅಭಿವೃದ್ಧಿಗೆ ನೆರವಾಗುವಂತೆ ಒತ್ತಾಯಿಸಿ ಹಸಿರು ಸಂಪದ ಬಳಗದ ವತಿಯಿಂದ ಶಾಸಕ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಶ್ರೀ ಸಿ ಎಸ್ ನಾಡಗೌಡ (ಅಪ್ಪಾಜಿ) ರವರಿಗೆ ಮನವಿ ಅರ್ಪಿಸಲಾಯಿತು.ಸುಂದರ ಹಾಗೂ ಹಸಿರುಮಯ ನಗರವನ್ನು ಮಾಡುವ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸನ್ಮಾನ್ಯ ಶಾಸಕರು ಶೀಘ್ರದಲ್ಲಿಯೇ ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಬಳಗದ ಅಧ್ಯಕ್ಷರು, ಉಪಾಧ್ಯಕ಼್ಷರು, ಕಾರ್ಯದರ್ಶಿ ಸಹಕಾರ್ಯದರ್ಶಿ, ಹಾಗೂ ಇತರೆ ಗೌರವಾನ್ವಿತ ಸದಸ್ಯರು ಉಪಸ್ಥಿತರಿದ್ದರು.

