ತಾಳಿಕೋಟಿ: ಡಿಸೆಂಬರ್ 21ರಿಂದ 24ರ ವರೆಗೆ ಪಟ್ಟಣದಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಆಶ್ರಯ ನಗರದಲ್ಲಿ ರವಿವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೈಲೆಟಿಸ್ ವೈರಸ್ ನಿಂದ ಪೋಲಿಯೋ ಬರಲಿದ್ದು 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಇದರಿಂದಾಗುವ ಸಂಭಾವ್ಯ ಅಂಗವಿಕಲತೆಯನ್ನು ತಡೆಗಟ್ಟಬಹುದಾಗಿದೆ. 2014ರಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶವೆಂದು ಘೋಷಿಸಿದೆ ಆದರೂ ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು. ತಹಸಿಲ್ದಾರ್ ಡಾ.ವಿನಯಾ ಹೂಗಾರ ಮಾತನಾಡಿ ಪಟ್ಟಣದಲ್ಲಿ ಡಿಸೆಂಬರ್ 21ರಿಂದ 24ರ ವರೆಗೆ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು ಹುಟ್ಟಿದ ಮಗುವಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಹೆತ್ತವರು ಕಡ್ಡಾಯವಾಗಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಈ ಕುರಿತು ಯಾವುದೇ ರೀತಿಯ ನಿರ್ಲಕ್ಷೆ ತೋರಬಾರದು ಎಂದರು. ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಹಿರಿಯ ಆರೋಗ್ಯಾಧಿಕಾರಿ ಫಿರೋಜ್ ಮುಲ್ಲಾ, ಪುರಸಭೆ ಕಚೇರಿ ವ್ಯವಸ್ಥಾಪಕ ಎಸ್.ಎಸ್.ಇಂಜಿಗನೇರಿ, ಪಿಎಚ್ ಸಿಓ ಮಧು ಟಕ್ಕಳಕಿ, ಆಶಾ ಕಾರ್ಯಕರ್ತೆಯರಾದ ಪದ್ಮಾ ನಾಡಕರ್ಣಿ, ಹೀರಾಬಾಯಿ ಗಾಯಕವಾಡ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *