ಮಗುವಿಗೆ ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದರು ತಪ್ಪದೇ ಎರಡು ಹನಿಪಲ್ಸ್ ಪೋಲಿಯೋ ಹನಿ ಹಾಕಿಸುವಂತೆ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ದೌಲಸಾಬ್ ಮುದ್ದಾಪುರ ಹೇಳಿದರು.
ಪಟ್ಟಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ 3729 ಮಕ್ಕಳಿಗೆ ಹನಿ ಹಾಕಿಸುವ ಗುರಿಯನ್ನು ಹೊಂದಿ 11 ತಂಡಗಳಾಗಿ ರಚಿಸಿ ಕೇಂದ್ರದ 5 ಉಪಕೇಂದ್ರದಲ್ಲಿ ಶೇ. 98.6 ಪ್ರಗತಿ ಸಾಧಿಸಲಾಗಿ ಎಂದು ತಿಳಿಸಿದರು. ಹಿರಿಯ ಆರೋಗ್ಯ ಮೇಲ್ವಿಚಾರಕಿ ಲಕ್ಷ್ಮೀಬಳ್ಳಾಪುರ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತಿತರರು ಹಾಜರಿದ್ದರು.
