ಸಿಂಧನೂರು : ಇಂದು ಸಿಂಧನೂರು ಘಟಕದ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಬ್ರದರ್. ಅಫ್ಜಲ್ ಹುಸೇನ್ ಅವರು ಸರ್ವಾನುಮತದಿಂದ 2026 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಇವರು ಸಿಂಧನೂರು ಘಟಕದ ಕಾರ್ಯದರ್ಶಿಯಾಗಿ ಕೂಡಾ ಸೇವೆ ಸಲ್ಲಿಸಿ ವಿದ್ಯಾರ್ಥಿ ಸಂಘಟನೆಯನ್ನೂ ಮುನ್ನಡೆಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ ಅವರನ್ನು ಅಲ್ಲಾಹ್ ಅವರ ನಾಯಕತ್ವದಲ್ಲಿ ಸ್ಥೈರ್ಯ (ಇಸ್ತಿಖಾಮತ್), ಸಾಮರ್ಥ್ಯ (ಸಲಾಹಿಯತ್) ಮತ್ತು ಧೈರ್ಯವನ್ನು ದಯಪಾಲಿಸಲಿ.
ಸಿಂಧನೂರು ಘಟಕವು ತನ್ನ ಸಂದೇಶವನ್ನು ವಿದ್ಯಾರ್ಥಿ ಸಮುದಾಯದವರೆಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಹಾಗೂ ಸಾಮಾಜಿಕ ಸೇವೆಗಳಲ್ಲಿ ಯಶಸ್ಸು ಸಾಧಿಸಲಿ ಎಂದು ಪ್ರಾರ್ಥಿಸೋಣ

