ತಾಳಿಕೋಟೆ: ತಾಲ್ಲೂಕಾ ಬ್ರಾಹ್ಮಣ ಸಮಾಜದ ವತಿಯಿಂದ ಪಟ್ಟಣದ ನಿಮಿಷಾಂಬಾ ದೇವಸ್ಥಾನದಲ್ಲಿ ಆರು ಕೋಟಿ ಶಿವಚಿದಂಬರ ಜಪಯಜ್ಞ ಸಂಕಲ್ಪಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.
ಆರಂಭದಲ್ಲಿ ಆರಂಭದಲ್ಲಿ ಶಿವಚಿದಂಬರ ಭಾವಚಿತ್ರಕ್ಕೆ ಹಾಗೂ ವೀಣೆಗೆ ಭಕ್ತಿ ಪೂಜೆ ಸಲ್ಲಿಸಲಾಯಿತು. ನಂತರ ನಾಲ್ಕು ಅಭಂಗ ಭಜನೆ ಹಾಡಲಾಯಿತು. ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿಯ ಪೂರ್ಣಾನಂದ ಟ್ರಸ್ಟ, ಗಾಮನಗಟ್ಟಿಯ ಚಿದಂಬರ ನಾಮ ಸಾದನಾ ಕೇಂದ್ರದ ಗುರು ಚಿದಂಬರ ದಿಕ್ಷಿತ ಅವರು, ತಮ್ಮ ಪ್ರವಚನದಲ್ಲಿ ಭೌತಿಕ ಜಗತ್ತಿನಲ್ಲಿ ಸಂಸಾರದ ಜಂಜಾಟದಲ್ಲಿ ನೆಮ್ಮದಿ ಬದುಕಿಗೆ ಭಗವಂತನ ನಾಮಸ್ಮರಣೆ ಅತ್ಯವಶ್ಯಕವಾಗಿದೆ. ಬಿಡುವಿಲ್ಲದ ಸಂಸಾರ ಸಾಗರದಲ್ಲಿ ಅವನ ಸ್ಮರಣೆಗೆ ಸಮಯಾವಕಾಶ ನೀಡಬೇಕು. ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಬದುಕಿನ ನೆಮ್ಮದಿ, ಸಾರ್ಥಕತೆ ಜೊತೆಗೆ ಮೋಕ್ಷಕ್ಕೆ ದಾರಿಯಾಗುತ್ತದೆ ಎಂದರು. ಜಪಮಣಿ ಪಡೆದವರು ಅದನ್ನು ಪೂರ್ಣ ವ್ರತವನ್ನು ಮಾಡಬೇಕು. ಮನದ ಕಲ್ಮಶಗಳನ್ನು ಕಳೆದು ಮನಸ್ಸನ್ನು ನಿರ್ಮಲವಾಗಿಸಿಕೊಂಡು ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸಬೇಕು ಇದರಿಂದ ಸುಖಶಾಂತಿ ದೊರೆಯುವುದು ಎಂದರು.
. ಪ್ರವಚನ ನಂತರ ಭಕ್ತಾದಿಗಳಿಗೆ ಜಪಮಾಲೆ ವಿತರಣೆ ಮಾಡಲಾಯಿತು. ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ತಾಳಿಕೋಟೆ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಭೀಮರಾವ್ ಕುಲಕರ್ಣಿ, ಜಗದೀಶ ದೇಶಪಾಂಡೆ, ಮಾಣಿಕರಾವ್ ಕುಲಕರ್ಣಿ, ಹಣಮೇಶ ಕುಲಕರ್ಣಿ, ಶೇಷಗಿರಿ ಕುಲಕರ್ಣಿ ಸೇರಿದಂತೆ ನೂರಾರು ಮಹಿಳಾ ಮತ್ತು ಪುರುಷ ಭಕ್ತಾದಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *