ತಾಳಿಕೋಟೆ: ತಾಲ್ಲೂಕಿನ ಗುಂಡಕನಾಳ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತಾ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮಗಳಿಂದ ಶುಕ್ರವಾರ ನೆರವೇರಿತು.
ಗುರುವಾರ ರಾತ್ರಿ ಗಂಗಸ್ಥಳಕ್ಕೆ ಹೋಗಿ ಶುಕ್ರವಾರ ಬೆಳಿಗ್ಗೆ 6.00 ಗಂಟೆಗೆ ಮರಳಿತು.
ಗ್ರಾಮದ ಅಗಸಿ ಮುಖ್ಯದ್ವಾರದಲ್ಲಿ ಗ್ರಾಮದ ಗೌಡರಾದ ಎಂ.ಜಿ.ಪಾಟೀಲ ಗುಂಡಕನಾಳ ಹಾಗೂ ಪರಿವಾರದವರು ಕುಂಬಳಕಾಯಿ ಒಡೆಯುವ ಮೂಲಕ ಗ್ರಾಮದೇವತೆಯನ್ನು ಸ್ವಾಗತಿಸಲಾಯಿತು. ಗಂಗಸ್ಥಳದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಕರಡಿ ಮಜಲು ಹಾಗೂ ಕುಂಭಮೇಳ ಗಮನ ಸೆಳೆದವು. ಗ್ರಾಮದೇವತೆ ದೇವಸ್ಥಾನದಲ್ಲಿ ಪಾದಗಟ್ಟೆಗೆ ಪ್ರತಿಷ್ಠಾಪಿತವಾದ ನಂತರ ಅರ್ಚಕರಾದ ಕಾಳಪ್ಪ ಬಡಿಗೇರ, ದೇವೀಂದ್ರ ಬಡಿಗೇರ, ಪ್ರಕಾಶ ಬಡಿಗೇರ, ದೇವೀಂದ್ರ ಪತ್ತಾರ ಅವರಿಂದ, ಸೀರೆ ಉಡಿಸಿ, ಮಡಿಲು ತುಂಬಿ, ಎಡ ಹಿಡಿದು ಕಾಯಿ, ಕರ್ಪೂರಗಳಿಂದ ಬೆಳಗಿ ಪೂಜಾಕಾರ್ಯ ಮಂಗಳಾರತಿ ನಡೆದವು . ಭಕ್ತಾದಿಗಳು ತಮ್ಮ ಭಕ್ತಿ ಅರ್ಪಣೆ ಮಾಡಿದರು ಉತ್ಸವದಲ್ಲಿ ಪ್ರಮುಖರಾದ ಶಶಿಧರ ಹಿರೇಮಠ, ಮಲ್ಲನಗೌಡ ಲಕ್ಕುಂಡಿ, ರಾಜುಗೌಡ ಗುಂಡಕನಾಳ, ವಿಜಯಕುಮಾರ ಗಬಸಾವಳಗಿ, ನಿಂಗನಗೌಡ ಜಿ.ಪಾಟೀಲ, ಎಸ್.ಎಂ.ಸಾವರದ, ಯಂಕಣ್ಣ ಬಿರಾದಾರ, ನಿಂಗನಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಸುನಿಲ ಬಡಿಗೇರ ಇತರರು ಇದ್ದರು.

Leave a Reply

Your email address will not be published. Required fields are marked *