ತಾಳಿಕೋಟೆ: ಪಟ್ಟಣದಲ್ಲಿ ಡಿ.21 ರಿಂದ 23 ರವರೆಗೆ ಮೂರು ದಿನಗಳ ಕಾಲ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ, ಕರ್ನಾಟಕ ಸರ್ಕಾರದ ಸೋಪ್ಸ್ ಮತ್ತು ಡಿಟರ್ಜಂಟ್ ನಿಯಮಿತದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ವಾಸ್ತವ್ಯ ಮಾಡಲಿದ್ದಾರೆ.
ಪಟ್ಟಣದಲ್ಲಿ ಡಿ.21 ಮತ್ತು 22 ರಂದು ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿ ವಾರ್ಡಿನಲ್ಲಿ ಪುರಸಭೆ ಅಧಿಕಾರಿಗಳು ಸಾರ್ವಜನಿಕ ಸಭೆ ನಡೆಸಿ ಸಾರ್ವಜನಿಕ ಕುಂದು ಕೊರತೆ ಮತ್ತು ವಾರ್ಡಿನ ಸಮಸ್ಯೆ ಕುರಿತು ಜನರ ಜೊತೆ ಸಮಾಲೋಚನೆ ನಡೆಸುವರು.
ಡಿ.21ರಂದು ವಾರ್ಡ ನಂ.1 ರಿಂದ 9ನೆಯ ವಾರ್ಡುಗಳು ಹಾಗೂ ಡಿ.22ರಂದು ವಾರ್ಡ ನಂ.10 ರಿಂದ 23 ರವರೆಗೆ ಕುಂದುಕೊರತೆ ಸಭೆಗಳನ್ನು ಪುರಸಭೆ ಆಡಳಿತಾಧಿಕಾರಿಗಳಾದ ಉಪವಿಭಾಗಾಧಿಕಾರಿ, ವಿಜಯಪುರ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರ ಸಮ್ಮುಖದಲ್ಲಿ ನಿರ್ಧಾರಿತ ಸ್ಥಳದಲ್ಲಿ ಬೆಳಿಗ್ಗೆ 9.00 ರಿಂದ ಸಾ.5.00 ಗಂಟೆ ವರೆಗೆ ಕುಂದುಕೊರತೆ ಸಭೆ ಜರುಗಲಿವೆ.
ಡಿ.23 ರಂದು ಪಟ್ಟಣದ ಪುರಸಭಾ ಆವರಣದಲ್ಲಿ ಬೆಳಿಗ್ಗೆ 11 ಘಂಟೆಗೆ ಅಧಿಕಾರಿಗಳ ತ್ರೈಮಾಸಿಕ (ಕೆ.ಡಿ.ಪಿ) ಸಭೆ ನಡೆಸಲಾಗುತ್ತದೆ
ಎಂದು ಪ್ರಕಟಣೆ ತಿಳಿಸಿದೆ.

