ವಿಶಾಖಪಟ್ಟಣದಿಂದ ಮೆಹಬೂಬ್ ನಗರ ನಡುವೆ ಪ್ರತಿ ದಿನ ಓಡಾಡುತ್ತಿರುವ ರೈಲನ್ನು ರಾಯಚೂರವರೆಗೆ ವಿಸ್ತರಿಸುವಂತೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಹಾಗೂ ತೆಲಂಗಾಣದ ಮಹಿಬೂಬ್ ನಗರ ಸಂಸದರಾದ ಡಿ.ಕೆ.ಅರುಣ ಅವರು ಕೇಂದ್ರದ ರೈಲ್ವೆ ಸಚಿವ ಶ್ರೀ ಅಶ್ವಿನ್ ವೈಷ್ಣವ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವಿಶಾಖಪಟ್ಟಣದಿಂದ ಮೆಹಬೂಬ್ ನಗರ ನಡುವೆ ಪ್ರತಿದಿನ ಓಡಾಡುತ್ತಿರುವ ರೈಲನ್ನು ರಾಯಚೂರ ವರೆಗೆ ವಿಸ್ತರಿಸಬೇಕು. ಇದರಿಂದಾಗಿ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬರಲಿದೆ ಎಂದು ರಾಯಚೂರ ಜಿಲ್ಲಾ ಕಮ್ಮಾ ಸಮಾಜದ ಜಿಲ್ಲಾಧ್ಯಕ್ಷರಾದ ಪ್ರಸಾದ್ ಮಾಜಿ ಅಧ್ಯಕ್ಷರಾದ ಆನಂದ್, ಕೊಂಡಯ್ಯ, ರಮೇಶ್ ಬೋಸ್ ಸೇರಿದಂತೆ ಇನ್ನಿತರ ಮುಖಂಡರು ನವದೆಹಲಿಗೆ ತೆರಳಿ ಈ ಸಂಬಂಧ ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದರು.

ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರನಾಯಕ ಮತ್ತು ಮಹಿಬೂಬ್ ನಗರ್ ಲೋಕಸಭಾ ಸದಸ್ಯರಾದ ಡಿ.ಅರುಣ ಅವರಿಗೆ ಭೇಟಿ ಮಾಡಿ ರೈಲು ವಿಸ್ತರಣೆಯ ಬಗ್ಗೆ ಮಾಹಿತಿ ನೀಡಿದರು. ಇದನ್ನು ತಕ್ಷಣ ಪರಿಗಣನೆಗೆ ತೆಗೆದುಕೊಂಡ ಉಭಯ ಲೋಕಸಭಾ ಸದಸ್ಯರು ತಕ್ಷಣ ನಿಯೋಗಕ್ಕೆ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ ಅವರಿಗೆ ಭೇಟಿ ಮಾಡಿಸಿದರು. ಕಮ್ಮಾ ಸಮಾಜದ ಮನವಿ ಆಲಿಸಿದ ಸಚಿವರು ಇಬ್ಬರು ಲೋಕಸಭಾ ಸದಸ್ಯರು ಲಿಖಿತವಾಗಿ ಈ ರೈಲು ಒದಗಿಸುವಂತೆ ಮನವಿ ಪತ್ರ ನೀಡಿದರೆ, ತಕ್ಷಣ ಕ್ರಮ ಜರುಗಿಸುವುದಾಗಿ, ಭರವಸೆ ನೀಡಿದರು.
ಸದ್ಯ ಈ ರೈಲು ವಿಶಾಖಪಟ್ಟಣ ಮೂಲಕ ಬಂದು ಮಹಬೂಬನಗರ ನಗರದಲ್ಲಿ ಬೆಳಗ್ಗೆ 9:30 ಗಂಟೆಯಿಂದ ವೃಥಾ ನಿಲ್ಲುತ್ತದೆ ಇದರಿಂದ ಇತರ ರೈಲುಗಳ ಓಡಾಟಕ್ಕೆ ಅಡಚಣೆಯಾಗುತ್ತದೆ.
ಇದನ್ನು ರಾಯಚೂರವರೆಗೆ ವಿಸ್ತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಇಲಾಖೆಗೆ ಆದಾಯದ ಮೂಲ ಗಟ್ಟಿಪಡಿಸಿಕೊಳ್ಳಬೇಕು ಎಂದರು.
ಈ ರೈಲು ಮಕ್ತಲ, ಕೃಷ್ಣಾ ಮೂಲಕ ರಾಯಚೂರಗೆ 12:00ಗೆ ಬರುತ್ತದೆ ಒಂದು ತಾಸು ಇಲ್ಲಿ ನಿಲುಗಡಿಯಾದರೂ, ಮತ್ತೆ 3:00ಗೆ ಮಹಬೂನಗರ ತಲುಪಿ ಅಲ್ಲಿಂದ ವಿಶಾಖಪಟ್ಟಣಕ್ಕೆ ತೆರಳಲು ಸಮಯಾವಕಾಶವಿದೆ. ಮತ್ತೆ ಸಂಜೆ 4: ಗಂಟೆಗೆ ವಿಶಾಖಪಟ್ಟಣಂ ಕಡೆಗೆ ಪ್ರಯಾಣ ಬೆಳೆಸಬಹುದು ಎಂದು ಮಾಹಿತಿ ನೀಡಿದರು. ಈ ರೈಲಿನ ಸಂಖ್ಯೆಯು 1 2861 ಮತ್ತು 12862 ಆಗಿದೆ. ವಿಶಾಖಪಟ್ಟಣಂ ಈ ರೈಲು ಮೂರು ರಾಜ್ಯಗಳನ್ನು ಹಾದು ಹೋಗುತ್ತದೆ ಇದು ಅಲ್ಲದೆ ಪವಿತ್ರ ಧರ್ಮಸ್ಥಳದ ಅನ್ನಾವರಂ ಮತ್ತು ಸಿಂಹಾಚಲಂ ಬರುತ್ತದೆ ಇದರಿಂದ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ರಾಯಚೂರು ನಗರ ಹಿರಿಯ ನಾಗರಿಕರಾದ ಎಸ್. ನಾಗೇಶ್ವರರಾವ್ ಮತ್ತು ಕೃಷ್ಣ ಗ್ರಾಮದ ಅರ್ಚಕರಾದ ಮತ್ತು ಗಡಿನಾಡು ಕನ್ನಡಿಗ ಹೋರಾಟಗಾರರಾದ ಅಮರ ದೀಕ್ಷೀತ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *