ಮಾನ್ವಿ: ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದ ಆವರಣದಲ್ಲಿನ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ವಾಸವಿ ಮಹಿಳಾ ಸಂಘದ ವತಿಯಿಂದ ನಡೆದ ವರಹ ಶ್ರೀದೇವಿ ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ನಗರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ದ್ವಾರಕನಾಥ ಭಟ್ ಉಪನ್ಯಾಸ ನೀಡಿ ಶ್ರೀ ಭಗವಾನ್ ಶ್ರೀ ವಿಷ್ಣುವಿನ ದಶವತಾರಗಳಲ್ಲಿ ಒಂದಾದ ವರಹ ಅವತಾರದಲ್ಲಿ ಭಗವಂತನನ್ನು ಶ್ರೀದೇವಿಯ ಜೋತೆಗೆ ಸುಮಂಗಲಿಯರು ಪೂಜಿಸುವುದರಿಂದ ಉತ್ತಮ ಫಲಗಳು ದೊರೆಯುತ್ತವೆ ಎಂದು ತಿಳಿಸಿದರು.
ನೂರಾರು ಮಹಿಳೆಯರು ಸಾಮೂಹಿಕವಾಗಿ ಭಕ್ತಿ ಶ್ರದ್ದೆಗಳಿಂದ ಪೂಜಿಸಿದರು. ವರಹ ಶ್ರೀದೇವಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷರಾದ ಆರ್ ಮುತ್ತುರಾಜ್ ಶೆಟ್ಟಿ, ಬಿ,ಈರಣ್ಣ ಶೆಟ್ಟಿ ,ನಯೋಪ್ರ ಸದಸ್ಯರಾದ ಎಂ. ಯಂಕಯ್ಯಶೆಟ್ಟಿ , ಸತ್ಯನಾರಾಯಣ ಶೆಟ್ಟಿ. ಈ.ರಾಮಾಂಜನೇಯ್ಯ ಶೆಟ್ಟಿ, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಇ.ಬಸವರಾಜ ಶೆಟ್ಟಿ , ಶ್ರೀ ವಾಸವಿ ಮಹಿಳಾ ಸಂಘದ ತಾ.ಅಧ್ಯಕ್ಷರಾದ ಶ್ರೀ ಲಕ್ಷಿö್ಮÃ ರಾಮಾಂಜನೇಯ್ಯಶೆಟ್ಟಿ,ಬಿ,ರಾಧ ರಾಘವೇಂದ್ರ ಶೆಟ್ಟಿ ಕಾರ್ಯದರ್ಶಿ,ಎಂ. ಶೋಭ ಯಂಕಯ್ಯ ಶೆಟ್ಟಿ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದರು.

