ಲಿಂಗಸಗೂರು:
ಲಿಂಗಸಗೂರು ತಾಲೂಕ ಚಿಕ್ಕ ಹೆಸರೂರು ಗ್ರಾಮದ ಕಿರಣ್ ಕುಮಾರ್ ಇವರು ಕರ್ನಾಟಕ ಜನ ಜಾಗೃತಿ ಸಮಿತಿ ಅಧ್ಯಕ್ಷರು ಹಾಗೂ ಪ್ರಸ್ತುತವಾಗಿ ಎಂ ವಿಶ್ವೇಶ್ವರಯ್ಯ ಪಿಯು ಮ್ಯಾನೇಜರ್ ಮತ್ತು ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇವರು.
ಶ್ರೀ ಚಿನ್ನಪ್ಪ ಮರಿಯಮ್ಮ ದಂಪತಿಗಳಿಗೆ 4 ಜನ ಸೋದರರು,2ಸಹೋದರಿಯರು.ಕಿರಣ್ ಕುಮಾರ್ ತಮ್ಮ ವಿದ್ಯಾಭ್ಯಾಸವನ್ನು ಮುದುಗಲ್ಲು ಹಾಗೂ ಬಳ್ಳಾರಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ.2001-03 ವರೆಗೆ ಬಿಡಿ ಡಿಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಇವರು.ನಂತರ 2003 -06 ವರೆಗೆ ಜಲನಯನ ಯೋಜನೆ ಅಡಿಯಲ್ಲಿ ಫೀಲ್ಡ್ ಗೈಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.ಹಾಗೂ ಸಮುದಾಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತುಮಕೂರಿನಲ್ಲಿ ಹಾಸನ ಅರಣ್ಯ ಪ್ರದೇಶಕ್ಕೆ ವಿಭಾಗ 2011 ರಿಂದ 2024ರ ಸಮನ್ವಯ ಅಧಿಕಾರಿಯಾಗಿ ಮೈಸೂರು ವಿಭಾಗ ಬಂಡಿಪುರ ವಿಭಾಗ, ಹುಣಸೂರು ವಿಭಾಗ,ಕೊಳ್ಳೇಗಾಲ ವಿಭಾಗ,ಬೆಂಗಳೂರು ಗ್ರಾಮಾಂತರ ವಿಭಾಗ,ಈ ಪ್ರದೇಶ ಅರಣ್ಯ ವಿಭಾಗದಲ್ಲಿ ನಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.ಲಿಂಗಸಗೂರಿನ ಲಿಟಲ್ ಫ್ಲವರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ದೈಹಿಕ ಶಿಕ್ಷಕರಾಗಿ ಮಕ್ಕಳನ್ನು ಕ್ರೀಡೆಯಲ್ಲಿ ಉತ್ತಮ ಸ್ಥಾನ ಪಡೆಯುವಂತೆ ಕ್ರೀಡಾ ಲೋಕದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದಕ್ಕೆ ಪ್ರೇರಣೆ ಆಗಿದ್ದಾರೆ.ಪ್ರಸ್ತುತವಾಗಿ ಇವರು ಲಿಂಗಸಗೂರಿನ ಸರ್ ಎಂ ವಿಶ್ವೇಶ್ವರಯ್ಯ ಪದವಿ ಪೂರ್ವ ಪಿ ಯು ಕಾಲೇಜ್ ಲಿಂಗಸಗೂರಿನಲ್ಲಿ ದೈಹಿಕ ಶಿಕ್ಷಕ ನಿರ್ದೇಶಕರಾಗಿ ತಾಲೂಕ,ಜಿಲ್ಲಾ,ಹಾಗೂ ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.ಅದೇ ರೀತಿ ಭಾರತ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ಮೂಡುಬಿದರಿಯಲ್ಲಿ ನಡೆದ ಇಂಟರ್ನ್ಯಾಷನಲ್ ಜಾoಬೂರಿಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡು ಅವರು ಸಹ ಭಾಗವಹಿಸಿದ್ದರು.ಎಲ್ಲಾ ಕಾರ್ಯ ಸಾಧನೆಗಳನ್ನು ಗುರುತಿಸಿದ ಹೈದರಾಬಾದಿನ ಸೆಂಟ್ರಲ್ ಫೈನ್ ಆರ್ಟ್ಸ್ ಫೌಂಡೇಶನ್ ಹಾಗೂ ಸ್ನೇಹ ಯುತ್ ಕಲ್ಚರ್ ಅಸೋಸಿಯೇಷನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತ್ಯಾಗರಾಯ ಗಣಸಭಾ ಚಿಕ್ಕಲ್ಲಪಲ್ಲಿ ಹೈದರಾಬಾದ್ ನಲ್ಲಿ ನಡೆದಂತ ಸುಂದರ ಕಾರ್ಯಕ್ರಮದಲ್ಲಿ.ಶ್ರೀ ರೋಯೂರ್ ಶೇಷ ಸಾಯಿ. ಡಾ.ವೇದನಾಥ ನಾಗ ಚಲಪತಿ ರಾವ್ ,ಡಾ.ವನಜ ಉದಯ್,ರಂಜಿತ್ ಕುಮಾರ್ ಎಂ,ಡಾ. ಹುಲಿಗೆಮ್ಮ ಅಮ್ಮನವರು ,ಮೌನದ್ದೀನ್ ಬೂದಿನಾಳ ,ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಶ್ರೀ ಕಿರಣ್ ಕುಮಾರ್ ಇವರಿಗೆ ಸಮಾಜ ಸೇವೆ ಹಾಗೂ ಕ್ರೀಡಾ ರತ್ನ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ಕಿರಣ್ ಕುಮಾರ್ ಇವರಿಗೆ ಸಮಾಜ ಸೇವಾ ಹಾಗೂ ಕ್ರೀಡಾ ರತ್ನ ರಾಷ್ಟ್ರ ಪ್ರಶಸ್ತಿ ಲಭಿಸಿದ್ದಕ್ಕೆ ತಂದೆ ತಾಯಿಗಳು ಹಾಗೂ ಗೆಳೆಯರ ಬಳಗ ಮತ್ತು ಕರ್ನಾಟಕ ಜನ ಜಾಗೃತಿ ಸಮಿತಿಯ ಸದಸ್ಯರು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇವರಿಗೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.
ಹೆಸರು : ಕಿರಣಕುಮಾರ
ತಂದೆಯ ಹೆಸರು: ಚಿನ್ನಪ್ಪ
ತಾಯಿಯ ಹೆಸರು: ಮರಿಯಮ್ಮ
ಸಹೋದರು : 4 ಜನ
ಸಹೋದರಿಯರು : 2 ಜನ
ಎರಡನೇಯ : ಕಿರಣ ಕುಮಾರ
ಗ್ರಾಮ: ಚಿಕ್ಕ ಹೆಸರೂರು
* LKG, UKG
* ಒಂದನೇಯ ತರಗತಿಯಿಂದ ಏಳನೇಯ ತರಗತಿಯ ವರೆಗೆ. ಆರ್.ಸಿ. ಮಿಷನ್ ಹಿರಿಯ ಪ್ರಾಥಮಿಕ ಶಾಲೆ ಮುದ್ಗಲ್,
* ಎಂಟನೇ ತರಗತಿಯಿಂದ ಹತ್ತನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ, ಕವಿತಾಳ,
* ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಸಂತ ಜೋನರ ಪದವಿ ಪೂರ್ವ ಕಾಲೇಜ್ ಬಳ್ಳಾರಿ,
* 2001 ರಿಂದ 2003 ರ ವರೆಗೆ ಬಿ ಡಿ ಡಿ ಎಸ್ ಬಳ್ಳಾರಿ ಯಲ್ಲಿ ಸ್ವ- ಸಹಾಯ ಸಂಘಗಳ ರಚನೆ ಸಂಘಗಳ ಸದಸ್ಯರಿಗೆ ಬ್ಯಾಂಕ್ ಸಂಪರ್ಕ ಒದಗಿಸುವುದು , ಹಾಗೂ child labour coordinator.
* 2003 ರಿಂದ 2006 ವರೆಗೆ ಜಲಾನಯನ ಯೋಜನೆಯ ಅಡಿಯಲ್ಲಿ ಫೀಲ್ಡ್ ಗೈಡ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಈ ಯೋಜನೆಯ ಕಾರ್ಯಕ್ರಮಗಳು ರೈತರ ಜಮೀನಿನಲ್ಲಿ ಬಂಡ್ ನಿರ್ಮಾಣ, CD ನಿರ್ಮಾಣ ಹಾಗೂ ಅರಣ್ಯ ಇಲಾಖೆಯ ಸಸಿಗಳ ನೆಡುವುದು ಹಾಗೂ ತೋಟಗಾರಿಕೆ ಇಲಾಖೆಯ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ, ಬಾಗಿ AG ಮತ್ತು SHG, ದಾಖಲಾತಿ ಬಗ್ಗೆ ತರಬೇತಿ, ಸ್ವಸಹಾಯ ಸಂಘಗಳಿಗೆ ತರಬೇತಿ, AG ಪುರುಷ ಸಂಘಗಳಿಗೆ ತರಬೇತಿ,
* 2006-2007 ರಿಂದ 2014 ವರೆಗೆ ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣ ಯೋಜನೆ ಅಡಿಯಲ್ಲಿ ( ಯೋಜನೆಯ ಅನುದಾನ ಜಪಾನ್ ಅಂತರಾಷ್ಟ್ರೀಯ ಸಹಕಾರ ಬ್ಯಾಂಕಿನ ನೆರವು) (ಕರ್ನಾಟಕ ಅರಣ್ಯ ಇಲಾಖೆ ಹಾಗೂ IBRD ಸಂಸ್ಥೆ ಕಲ್ಕತ್ತಾ ) ಇವರ ಸಹಯೋಗದಲ್ಲಿ
* 2006-07 ಸಾಲಿನಲ್ಲಿ ಮಡಿಕೇರಿ ವಿಭಾಗದ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ,
* 2007 ರಿಂದ 2011 ರವರೆಗೆ ಸಮುದಾಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತುಮಕೂರು. Facilitator ರಾಗಿ ಹಾಸನ ಅರಣ್ಯ ಪ್ರಾದೇಶಿಕ ವಿಭಾಗ
* 2011 ರಿಂದ ಸೆಪ್ಟೆಂಬರ್ 2014 ರ ಸಮನ್ವಯ ಅಧಿಕಾರಿಯಾಗಿ ಮೈಸೂರು ವಿಭಾಗ, ಬಂಡಿಪುರ ವಿಭಾಗ, ಹುಣಸೂರು ವಿಭಾಗ, ಕೊಳ್ಳೇಗಾಲ ವಿಭಾಗ, ಬೆಂಗಳೂರು ಗ್ರಾಮಾಂತರ ವಿಭಾಗ, ಈ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ
* * 1) ಗ್ರಾಮ ಅರಣ್ಯ ಸಮಿತಿಗಳ ರಚನೆ. ಒಂದು ಗ್ರಾಮ ಅರಣ್ಯ ಸಮಿತಿ 100 ಹೇಕ್ಟರ್ ಪ್ರದೇಶ ಇರುತ್ತದೆ. ಪಾಲು ಹಂಚಿಕೆ
* ಕಿರು ಅರಣ್ಯ ಪ್ರೋತ್ಸಾಹ 90% 10%
* ಹಳೆ ನೆಡು ತೋಪು 50% 50%
* ಹೊಸ ನೇಡು ತೋಪು 80% 20%
* ಈ ರೀತಿಯ ಪಾಲು ಹಂಚಿಕೆಯನ್ನು ಗ್ರಾಮ ಅರಣ್ಯ ಸಮಿತಿಗೆ ಪಾಲು ಕೊಡಿಸಲಾಯಿತು. ಗ್ರಾಮ ಅರಣ್ಯ ಸಮಿತಿಯಲ್ಲಿರುವ ಸ್ವ – ಸಹಾಯ ಗುಂಪುಗಳಿಗೆ ಸರ್ಕಾರದಿಂದ ಅರಣ್ಯ ಇಲಾಖೆಯ ಮೂಲಕ
1 ಲಕ್ಷ ರೂಗಳನ್ನು (income generation activities ) (ಆದಾಯ ತರುವ ಚಟುವಟಿಕೆಗಳಿಗೆ ಮಾತ್ರ ಬಳಸೋಣ ) ಪ್ರತಿ ಸಂಘಕ್ಕೆ ಸುತ್ತ ನಿದಿ ರೂಪದಲ್ಲಿ ನೀಡುವುದು, ಸ್ವ ಸಹಾಯ ಸಂಘದ ಸದಸ್ಯರುಗಳು ಈ ಹಣವನ್ನು ಹೈನುಗಾರಿಕೆಗಾಗಿ, ಹಂದಿ ಸಾಕಾಣಿಕೆಗಾಗಿ, ಕುರಿ ಸಾಕಣಿಕೆಗಾಗಿ, ಮೀನು ಸಾಕಾಣಿಕೆಗಾಗಿ, ಇತರೆ ಆದಾಯ ತರುವಂತ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಂಡು, ಆರ್ಥಿಕ ನಿವಾರಣೆ ಮಾಡುವುದಲ್ಲದೆ, ಒಂದು ಲಕ್ಷ ಕೊಟ್ಟಿರುವ ಹಣ ಸುತುನಿದಿಯಾಗಿ ಬಳಸಿಕೊಂಡು, ತಾವು ಆರ್ಥಿಕವಾಗಿ ಬೆಳೆಯುವುದಲ್ಲದೆ ಹಣವು ಈಗ ಐದರಿಂದ ಹತ್ತು ಲಕ್ಷ ಪ್ರತಿ ಗ್ರಾಮ ಅರಣ್ಯ ಸಮಿತಿಗೆ ಜಮಾ ಆಗಿರುತ್ತದೆ.
* ಅರಣ್ಯ ಇಲಾಖೆಯಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ ತರಬೇತಿದಾರನಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾಗಿರುತ್ತೇನೆ.
* BA ಹಾಗೂ BPED ಹಾಸನ/ ಬೆಂಗಳೂರು ಓಪನ್ ಯುನಿವರ್ಸಿಟಿಯಲ್ಲಿ ಪದವಿಯನ್ನು ಮಾಡಲಾಯಿತು
* 29.10.2017 ಯಿಂದ 01.01.2021 ರ ವರೆಗೆ ಲಿಟಲ್ ಫ್ಲವರ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಲಿಂಗಸೂಗೂರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಮಕ್ಕಳನ್ನು ಸ್ಪೋರ್ಟ್ಸ್ದಲ್ಲಿ ಉತ್ತಮ ಸ್ಥಾನ ಪಡೆವಂತೆ ಮಾಡಿ ಕ್ರೀಡಾ ಲೋಕದಲ್ಲಿ ಉತ್ತಮ ಸಾಧನೆ ಪಡೆದಿರುತ್ತಾರೆ.
* 01.01.2021 ರಿಂದ ಡಿಸೆಂಬರ್ 2025 ಇಲ್ಲಿಯವರೆಗೆ ಸರ್ ಎಂ ವಿಶ್ವೇಶ್ವರಯ್ಯ ಪದವಿ ಪೂರ್ವ ಪಿ ಯು ಕಾಲೇಜ್ ಲಿಂಗಸುಗೂರಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಪಡೆದು ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾರೆ.
* ಹಾಗೂ ಭರತ್ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ಮೂಡುಬಿದಿರೆಯಲ್ಲಿ ನಡೆದ ಇಂಟರ್ನ್ಯಾಷನಲ್ ಜಾಂಬೂರಿಯಲ್ಲಿ ವಿದ್ಯಾರ್ಥಿಗಳನು ಒಳಗೊಂಡು ಅವರು ಕೂಡ ಭಾಗವಹಿಸುತ್ತೇನೆ.
* ಈಗ ಪ್ರಸ್ತುತ ಕರ್ನಾಟಕ ಜನ ಜಾಗೃತಿ ಸಮಿತಿ (ರಿ) ಲಿಂಗಸೂಗೂರ ತಾಲೂಕು ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿರುತ್ತಾರೆ

