ಮಾನವಿ: ಡಿ 18 ರಂದು ಉಮಳಿ ಹೊಸುರು ಕ್ರಿಸ್ತನ ಸಭೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ನಡೆಯಿತು ಈ ಕಾರ್ಯಕ್ರಮದಲ್ಲಿ ಸುಮಾರು 300 ಜನಕ್ಕೆಕಣ್ಣಿನ ತಪಾಸಣೆ ಮಾಡಲಾಯಿತು ಈ ಗ್ರಾಮದಲ್ಲಿ ಕ್ರಿಸ್ತನ ಸಭೆ ತುಂಬಾ ಸಮಾಜಿಕವಾದಂತಹ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದೆ ಕೊವಿಡ ಸಮಯದಲ್ಲಿ ಆಹಾರ ಕಿಟ್ಟುಗಳನ್ನು ವಿತರಿಸಿದೆ ಮತ್ತು ಬೇಸಿಗೆಯಲ್ಲಿ ನೀರಿನ ಅರವಟ್ಟಿಗೆಗಳನ್ನು ಮಾಡಿ ದಾಹವನ್ನು ತೀರಿಸುವ ನಿಟ್ಟಿನಲ್ಲಿ ತೆಂಗಿನಕಾಯಿ ಎಳೆನೀರು ವಿತರಣೆ ಕಾರ್ಯಕ್ರಮ ಮಕ್ಕಳಿಗೆ ಪೆನ್ನು ಮತ್ತು ಪುಸ್ತಕಗಳ ವಿತರಣೆ ವೃದ್ಧರಿಗೆ ಬೆಡ್ ಶೀಟ್ ಗಳು ವಿತರಣೆ ಹೀಗೆ ಅನೇಕವಾದ ಸಾಮಾಜಿಕ ಸೇವೆ ಅತ್ಯುತ್ತಮವಾಗಿ ಮಾಡುತ್ತಾ ಬಂದಿದೆ ಈ ದಿನದಲ್ಲಿ ಸುಮಾರು ಮೂರು ನೂರು ಜನಕ್ಕೆ ಕಣ್ಣಿನ ತಪಾಸಣೆ ಮಾಡಲಾಯಿತು. ಇದರಲ್ಲಿ 36 ಜನಕ್ಕೆ ಕಣ್ಣಿನ ಪೊರೆ ಬಂದಿದ್ದು ಈ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲು ಡಾಕ್ಟರ್ ಶಂಕರ ದೃಷ್ಟಿ ಆಸ್ಪತ್ರೆ, ಸಿಂಧನೂರು ಮತ್ತು ಶಿವಮೊಗ್ಗ ಇವರು ತಿಳಿಸಿದ್ದಾರೆ ಇಂಥ ಕಾರ್ಯಕ್ರಮಗಳನ್ನು ಮಾಡುವುದರಿಂದ ಶ್ಲಾಘನೀಯ ವೈದ್ಯರು ಮತ್ತು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರೆ ಎಲ್ಲಾ ಜವಾಬ್ದಾರಿಯನ್ನು ಕ್ರಿಸ್ತನ ಸಭೆ ಹೊತ್ತುಕೊಂಡು ಮಾಡುತ್ತದೆ ಎಂದು ಸುವಾರ್ತಿಕರಾದ ದೇವರಾಜ್ ಅವರು ತಿಳಿಸಿದ್ದಾರೆ ಇಂತಹ ಇನ್ನೂ ಅನೇಕ ಸಮಾಜವಾದಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವಂತೆ ದೇವರು ಶಕ್ತಿಯನ್ನು ಅನುಗ್ರಹಿಸಲಿ ಮನುಷ್ಯರ ಪ್ರೋತ್ಸಾಹ ದಯೆಯು ಕೂಡ ಇರಲಿ ಜನಪರ ಬಡವರ ಇನ್ನು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತ ಮುಂದುವರಿಲಿ ಎಂದು ಜನರು ಹರಸಿ ಕೊಂಡಾಡಿದರು ಈ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಿ ತುಂಬಾ ಒಳ್ಳೆಯ ಕೆಲಸ ಮಾಡಿದೆ ಎಂದು ಬಂದಂತ ಜನರು ಇದರಿಂದ ನನಗೆ ತುಂಬಾ ಉಪಯೋಗವಾಗಿದೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಉಚಿತವಾಗಿ ನಮಗೆ ದೊರಕಿದೆ ಎಂದು ಬಹಳ ಸಂತೋಷಪಟ್ಟರು ಈ ಕಾರ್ಯಕ್ರಮದಲ್ಲಿ ಕ್ರಿಸ್ತನ ಸಭೆಯ ಸುವಾರ್ತಿಕರಾದ ದೇವರಾಜ್ ಮತ್ತು ರೈತ ಸಂಘದ ರಾಜಸಾಬ್ ಚಂದ್ರಶೇಖರಯ್ಯ ಸ್ವಾಮಿ ಕುಮಾರ ಆನಂದಮ್ಮ ಮಹಾದೇವಮ್ಮ ಇನ್ನಿತರರು ಭಾಗಿಯಾಗಿದ್ದರು

Leave a Reply

Your email address will not be published. Required fields are marked *