ಅರಕೇರಾ:
ತಾಲೂಕಿನ ಬಿ.ಗಣೇಕಲ್ ಗ್ರಾಮದ ಭಕ್ತರ ಆರಾಧ್ಯ ದೈವ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಡಿ.19 ರಿಂದ ಡಿ. 24 ರವರೆಗೆ ಜರುಗಲಿದೆ.
ಡಿ.19 ರಂದು ಬೆಳಿಗ್ಗೆ 05:30ಕ್ಕೆ ಅರ್ಚಕರಿಂದ ವಿಶೇಷ ಪೂಜೆ, ರಾತ್ರಿ 8:30 ರಿಂದ ಪಲ್ಲಕ್ಕಿ ಮೆರವಣಿಗೆ ಜೊತೆಗೆ ಗಂಗಾಸ್ಥಳಕ್ಕೆ ಹೋಗುವ ಕಾರ್ಯಕ್ರಮ ನಂತರ 10:00 ರಿಂದ ಊರಗೌಡರ ಮನೆತನದಿಂದ ಜ್ಯೋತಿ ಸೇವೆ ಮತ್ತು ಮುದುಕಣ್ಣ ತಾತನವರಿಂದ ಶ್ರೀ ಮಾರುತೇಶ್ವರ ಹೇಳಿಕೆ (ಕಾರ್ಣೀಕ) ಕಾರ್ಯಕ್ರಮ ಜರುಗಲಿದೆ. ಹೀಗೆ ಡಿ. 22 ರವರೆಗೆ ವತ್ತನದಾರರ ಮನೆತನದಿಂದ ಹಾಗೂ ವಿವಿಧ ಜನಾಂಗದ ಮನೆತನದಿಂದ ಜ್ಯೋತಿ ಸೇವೆ ಕಾರ್ಯಕ್ರಮ ಇರುತ್ತದೆ. ಡಿ.22 ರಂದು ಉಚ್ಚಾಯ ಉತ್ಸವ ಜರುಗಲಿದೆ.
ಡಿ.23 ರಂದು ಬೆಳಿಗ್ಗೆ 10:೦೦ ರಿಂದ 3:೦೦ ಗಂಟೆಯವರೆಗೆ ಸಮಸ್ತ ಜನಾಂಗದ ವತಿಯಿಂದ ದೈವಪೂಜೆ, ದೀರ್ಘದಂಡ ನಮಸ್ಕಾರ ಹಾಗೂ ಜ್ಯೋತಿ ಸೇವೆ ಕಾರ್ಯಕ್ರಮ ನಂತರ ರಾತ್ರಿ 9:30 ಕ್ಕೆ ಶ್ರೀ ಮಾರುತೇಶ್ವರ ಮಹಾರಥೋತ್ಸವ ಜರುಗಲಿದೆ. 10:00 ಕ್ಕೆ ಗ್ರಾಮದ ಕಲಾವಿದರಿಂದ ಬಯಲಾಟ ಪ್ರದರ್ಶನ ಇರುತ್ತದೆ. ಡಿ.24 ರಂದು ಮಧ್ಯಾಹ್ನ 2:00 ಗಂಟೆಗೆ ಹಾಲುಗಂಭ ಉತ್ಸವ ನಡೆಯಲಿದೆ ಈ ಉತ್ಸವದಲ್ಲಿ ವಿಜಯಶಾಲಿಯಾದವರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

