ಮಾನ್ವಿ : ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಅಯ್ಕೆ ಸಭೆಯಲ್ಲಿ ಕ.ಕಾ.ನಿ.ಪ.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಆರ್.ಗುರುನಾಥ ಮಾತನಾಡಿ ಸಮಾಜದಲ್ಲಿ ವಿದ್ಯಾಮಾನಗಳನ್ನು ಜನರಿಗೆ ತಿಳಿಸುವ ಸಂವಿಧಾನದ ನಾಲ್ಕನೆ ಅಂಗವೆAದೆ ಪರಿಗಣಿಸಲಾಗಿರುವ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಕ್ಷೇಮಾಭಿವೃದ್ದಿಗಾಗಿ ಪತ್ರಕರ್ತರನ್ನು ಸಂಘಟಿಸುವ ಕಾರ್ಯವನ್ನು ಸಂಘವು ಮಾಡುತ್ತಿದೆ ಈ ಬಾರಿಯಿಂದ ರಾಜ್ಯ ಘಟಕವು ತಾಲೂಕು ಘಟಕಗಳಿಗೆ ಪ್ರತ್ಯಕವಾದ ಸ್ಥಾನಮಾನವನ್ನು ನೀಡಿ ಗುರುತಿಸಿರುವುದರಿಂದ ತಾಲೂಕಿನ ಪರ್ತಕರ್ತರ ಶ್ರೇಯಸ್ಸಿಗಾಗಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು 3 ವರ್ಷದ ಅವಧಿಗಾಗಿ ಸದಸ್ಯರು ಆಯ್ಕೆ ಮಾಡಿಕೊಳ್ಳಲಿದ್ದಾರೆ ಜಿಲ್ಲಾ ಘಟಕವು ಅತ್ಯಂತ ಶಿಸ್ತು ಬದ್ದವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಘದ ಸದಸ್ಯರ ಒಮ್ಮತದ ಆಯ್ಕೆಯಂತೆ ತಾಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ಯಶಸ್ವಿಯಾಗಿ ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ನಂತರ ನಡೆದ ತಾಲೂಕು ಘಟಕದ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ತಾ. ಅಧ್ಯಕ್ಷರಾಗಿ ಅಶೋಕ ತಡಕಲ್, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್ , ಉಪಾಧ್ಯಕ್ಷರಾಗಿ ದೇವಪ್ಪ ಬ್ಯಾಗವಾಟ್, ಗೂಳಪ್ಪ ನೀರಮಾನ್ವಿ, ಕಾರ್ಯದರ್ಶಿಯಾಗಿ ಅಜಯಕುಮಾರ್, ಖಜಾಂಚಿಯಾಗಿ ವಿಜಯಕುಮಾರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪಿ.ಪರಮೇಶ , ಕೃಷ್ಣಮೂರ್ತಿ ಗುಡಿ ,ಮಾರೆಪ್ಪ ದೊಡ್ಡಮನಿ, ಚಂದ್ರಶೇಖರ ಮದ್ಲಾಪೂರು, ಈಶಪ್ಪ ಬೈಲ್ ಮರ್ಚೇಡ್, ಆನಂದಸ್ವಾಮಿ ಹಿರೇಮಠ ನಕ್ಕುಂದಿ, ಶಿವಕುಮಾರ್ ಜಗ್ಲಿ ಆಯ್ಕೆಯಾದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು.
ಕ.ಕಾ.ನಿ.ಪ.ಪತ್ರಕರ್ತರ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಸಿದ್ಧಯ್ಯ ಸ್ವಾಮಿ ಕುಕನೂರು, ಜಿಲ್ಲಾ ಉಪಾಧ್ಯಕ್ಷರಾದ ಮಹಾನಂದ ನಾಯಕ, ಸೂಗುರೇಶ ಎಸ್. ಗುಡಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಬೋಗಾವತಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಲಕ್ಷ್ಮಿ ಪ್ರಸನ್ನ ಜೈನ್ , ಲಕ್ಷ್ಮಣ ಕಪಗಲ್, ತಾಯಪ್ಪ ಬಿ.ಹೊಸೂರು ಹಾಗೂ ಮಾನ್ವಿ ತಾಲೂಕು ಘಟಕದ ಸದಸ್ಯರು ಇದ್ದರು.

