ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ತಾಲೂಕ ವೈದ್ಯಾಧಿಕಾರಿ ಡಾ.ಶರಣಬಸವರಾಜ ಮಾತನಾಡಿ ತಾಲೂಕಿನಾದ್ಯಂತ ಡಿ.21 ರಿಂದ ಡಿ.24 ರವರೆಗೆ ನಡೆಯಲಿರುವ ಪೋಲಿಯೊ ಮುಕ್ತ ಭಾರತ-ಪಲ್ಸ್ ಪೋಲಿಯೊ ಅಭಿಯಾನ ಅಂಗವಾಗಿ ಪೋಲಿಯೋ ಲಸಿಕೆಯನ್ನು ನೀಡುವುದಕ್ಕೆ 0-5 ವರ್ಷದ 47,920 ಮಕ್ಕಳನ್ನು ಆರೋಗ್ಯ ಇಲಾಖೆಯಿಂದ ಗುರುತಿಸಲಾಗಿದ್ದು ಲಸಿಕೆ ಹಾಕುವುದಕ್ಕೆ 221 ಟೀಮ್ ಗಳನ್ನು ರಚಿಸಲಾಗಿದೆ. ಹಾಗೂ33 ಸಂಚಾರಿ ಟೀಮ್ ಗಳ ಮೂಲಕ ವ್ಯಾಕ್ಸಿನ್ ಸಾಮಾಗ್ರಿಗಳನ್ನು ತಲುಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ . 442 ಆಶಾ,ಅಂಗನವಾಡಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರನ್ನು ಪೋಲಿಯೊ ವ್ಯಾಕ್ಸಿನ್ ಹಾಕಲು ನೇಮಿಸಲಾಗಿದೆ. 47 ಸೂಪರವೈಸರ್ ಗಳನ್ನು ಕೂಡ ನೇಮಿಸಲಾಗಿದೆ ತಾಲೂಕಿನ ಯಾವೊಂದು ಮಗು ಕೂಡ ಪೋಲಿಯೋ ಲಸಿಕೆಯಿಂದ ವಂಚಿವಾಗದAತೆ ಅಗತ್ಯ ಸಿದ್ದೆತೆಗಳನ್ನು ಕೈಗೊಳ್ಳಲಾಗಿದೆ ಗ್ರಾಮೀಣ ಭಾಗದಲ್ಲಿನ ಜನರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಶಿಕ್ಷಣ ಇಲಾಖೆಯ ಸಹಕಾರದಿಂದ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರೇಡ್2 ತಹಸೀಲ್ದಾರ ಅಬ್ದುಲ್ ವಾಹಿದ್ ಮಾತನಾಡಿ ಮಾನ್ವಿ ತಾಲೂಕಿನಾದ್ಯಂತ ನಡೆಯುವ ಪಲ್ಸ್ ಪೋಲಿಯೊ-2025 ಅಭಿಯಾನದ ಯಶಸ್ಸಿಗೆ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಅಗತ್ಯ ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು, ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಗತ್ಯ ಸಹಕಾರ ನೀಡುವ ಮೂಲಕ ತಾಲೂಕನ್ನು ಪೋಲಿಯೊ ಮುಕ್ತಗೊಳಿಸೋಣ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಂದ್ರಶೇಖರ ಸ್ವಾಮಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ.ಡಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ , ತಾಲೂಕು ಪಂಚಾಯಿತಿ ಉ.ಖಾ.ಸಹಾಯಕ ನಿರ್ದೇಶಕರಾದ ದೀಪಾ ಅರಳಿ ಕಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.
18-ಮಾನ್ವಿ-1:
ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

Leave a Reply

Your email address will not be published. Required fields are marked *