ರಾಯಚೂರು:ತಿರುಪತಿಯಿಂದ ಪ್ರಯಾಗ ರಾಜ್ ಗೆ ಏಕಮುಖ ವಿಶೇಷ ರೈಲು ಒಂದು ದಿನ ಓಡಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ.
ವಿಶೇಷ ರೈಲು (ಸಂಖ್ಯೆ 07298) ಒಂದುದಿನದ ಒಂದೇ ಮಾರ್ಗದ ವಿಶೇಷ ಸೇವೆ ಒದಗಿಸಲಿದ್ದು ಡಿ.20 ರಂದು ಬೆಳಿಗ್ಗೆ 8.15 ಕ್ಕೆ ತಿರುಪತಿಯಿಂದ ಹೊರಡುವ ಈ ರೈಲ್ವೆ ರೇಣಿಗುಂಟಾ, ರಾಜಮ್ ಪೇಟ್, ಕಡಪ, ಯರಗುಂಟಾ, ಗೂಟಿ, ಗುಂತಕಲ್, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ವಿಕರಬಾದ್, ಲಿಂಗಂಪಲ್ಲ, ಸಿಕಂದರ್ ಬಾದ್, ಕಾಝೀ ಪೇಟೆ, ಪೆದ್ದಪಲ್ಲಿ, ಮಂಚಿರಿಯಾಳ, ಸಿರಪುರ ಕಾಗಜನಗರ, ಚಂದ್ರಪುರ, ನಾಗಪುರ, ಬೆತುಲ್, ಇಟರಸಿ, ಭೋಪಾಲ, ಬಿನಾ, ಝಾನ್ಸಿ, ಓರಿಯಾ, ಗೋವಿಂದಪುರಿ ಮಾರ್ಗವಾಗಿ ಬೆಳಿಗ್ಗೆ 4.30 ಕ್ಕೆ ಪ್ರಯಾಗರಾಜ್ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಇದರ ಪ್ರಯೋಜ ಪಡೆಯಬೇಕೆಂದು ಅವರು ಕೋರಿದ್ದಾರೆ.
