ಸಿಂಧನೂರು ಡಿಸೆಂಬರ 17: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಜಾಗೃತಿ ಜಾಥಾ ನೆಡೆಯಿತು
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ ಉಮೇಮಾ ಅಮೇರಾ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಷ್ಟ್ರದ್ಯಾಂತ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಏಕಕಾಲದಲ್ಲಿ ಪಲ್ಸ್ ಪೋಲಿಯೋ ಹನಿ ಹಾಕಲಾಗುತ್ತದೆ ಸಾರ್ವಜನಿಕರು ತಮ್ಮ ಮಕ್ಕಳಿಗೆ ತಪ್ಪದೇ ಡಿಸೆಂಬರ್ 21ರಂದು ಪೋಲಿಯೋ ಭೂತಗಳಿಗೆ ನಿಮ್ಮ ಮಕ್ಕಳನ್ನು ಕರೆದೊಂದು ತಪ್ಪದೆ ಲಸಿಕೆಯನ್ನು ಕೊಡಿಸಬೇಕು ಎಂದರು.
ನಂತರ ಮಾತನಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ ನಾಯಕ ಅವರು ಭಾರತ ಪೋಲಿಯೋ ಮುಕ್ತವಾಗಿದ್ದರೂ ಪಕ್ಕದ ರಾಷ್ಟ್ರಗಳಲ್ಲಿರುವ ಪೋಲಿಯೋ ಪ್ರಕರಣಗಳಿಂದ ಮುಂಜಾಗ್ರತ ವಹಿಸಿ ಪ್ರತಿವರ್ಷ ಮಕ್ಕಳಿಗೆ ಪೋಲಿ ಹನಿ ಹಾಕಲಾಗುತ್ತದೆ ತಪ್ಪದೇ ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದರು
ನಂತರದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಶಾಲಾ ಮಕ್ಕಳಿಂದ ಘೋಷಣೆಗಳನ್ನು ಹಾಕಿಸಿದರು. ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಕೊಡಿಸಿದ್ದರು ಅಭಿಯಾನದಲ್ಲಿ ತಪ್ಪದೆ ಲಸಿಕೆಯನ್ನು ಹಾಕಿಸಬೇಕು ಪೋಲಿಯೋ ಲಸಿಕೆಯ ಸಂಪೂರ್ಣ ಸುರಕ್ಷಿತ ಎರಡು ಜೀವ ರಕ್ಷಕ ಹನಿಗಳನ್ನು ತಪ್ಪದೇ ನಿಮ್ಮ ಮಕ್ಕಳ ಆರೋಗ್ಯದ ಗೆಲುವಿಗಾಗಿ ಹಾಕಿಸಬೇಕು ಮಕ್ಕಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೋಲಿಯ ಕುರಿತು ಜಾಗೃತಿ ಜಾಥಾವನ್ನು ನೆಡೆಸಲಾಯಿತು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ, ಅಂಬಮ್ಮ ,ಉದಯಕುಮಾರ , ಸಿಬ್ಬಂದಿ ವರ್ಗದವರು ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

