ಸಿಂಧನೂರು, ಡಿಸೆಂಬರ್ 18:* ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು,ತಾಲೂಕಾರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಹಾಗೂ ಶಿಕ್ಷಣ ಇಲಾಖೆ , ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಂಧನೂರು ಗಳ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಜಾಗೃತಿ ಜಾಥಾ ನಡೆಯಿತು.
ಮಹೆಬೂಬಿಯಾ ಕಾಲೋನಿಯ ಚುನಾಯಿತ ಪ್ರತಿನಿಧಿಯಾದ ಗಿಣಿವಾರ ಶೇಖರಪ್ಪ ಜಾಥಾಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, “ರಾಷ್ಟ್ರವ್ಯಾಪಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಏಕಕಾಲದಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಸಾರ್ವಜನಿಕರ ಸಹಕಾರ ಮತ್ತು ಸ್ವಯಂ ಪ್ರೇರಿತ ಲಸಿಕೆ ಹಾಕಿಸುವುದು ಅಗತ್ಯ” ಎಂದರು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಪೋಲಿಯೋ ಲಸಿಕೆ ಹಾಕಿಸಿ” ಎಂದು ಮಕ್ಕಳೊಂದಿಗೆ ಮಕ್ಕಳಾಗಿ ಘೋಷಣೆ ಕೂಗುವ ಮೂಲಕ ಸಾರ್ವಜನಿಕರಿಗೆ ಕರೆ ನೀಡಿದರು.
ತಾಲೂಕಾ ಹಿರಿಯ ಆರೋಗ್ಯ ಸಹಾಯಕ ಸಂಗನಗೌಡ ಮಾತನಾಡಿ, “5 ವರ್ಷದೊಳಗಿನ ಮಕ್ಕಳಿಗೆ ಡಿಸೆಂಬರ್ 21ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಾದ ಮರು ದಿನದಿಂದ ನಮ್ಮ ಸಿಬ್ಬಂದಿಗಳು ಡಿಸೆಂಬರ್ 22 ರಿಂದ 24 ರ ವರೆಗೆ ಮನೆ ಭೇಟಿ ಮಾಡಿ ಯಾವೂದೆ ಮಗು ಲಸಿಕೆಯಿಂದ ವಂಚಿತರಾಗದಂತೆ ನಿಗಾ ವಹಿಸುತ್ತದೆ ಆದ್ದರಿಂದ ಸಿಬ್ಬಂದಿಯವರು ಮನೆ ಭೇಟಿ ಮಾಡುವುದನ್ನು ಕಾಯದೆ ಸನೀಪದ ಬೂತ್‌ಗಳಿಗೆ ಮಕ್ಕಳನ್ನು ಮೊದಲನೆ ದಿನವೆ ಕರೆದೊಯ್ಯುತ್ತಾ ಲಸಿಕೆ ಹಾಕಿಸಿ” ಎಂದರು.
ಸರ್ಕಾರಿ CPS ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬಸನಗೌಡ ಬಿರಾದಾರ ಮಾತನಾಡಿ, “ಭಾರತ ಪೋಲಿಯೋ ಮುಕ್ತವಾಗಿದ್ದರೂ ಪದೆ ಪದೆ ಇನ್ನೂ ಹಲವು ವರ್ಷಗಳ ವರೆಗೆ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡು ನಿಮ್ಮ ಮಕ್ಕಳಲ್ಲಿ ಪೋಲಿಯೊ ರೋಗ ಹರಡದಂತೆ ನಿಗಾವಹಿಸುತ್ತಿದೆ ಕಾರಣ ಮುಂಜಾಗ್ರತೆಗಾಗಿ ಪ್ರತಿ ವರ್ಷದಂತೆ ಈ ವರ್ಷವು ಲಸಿಕೆ ನೀಡಲಾಗುತ್ತದೆ. ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ ಎಂದು ಸಲಹೆ ನೀಡಿದರು.
ತಾಲೂಕಾ ಮೇಲ್ವಿಚಾರಕ ಎಫ್.ಎ.ಹಣಗಿ ಶಾಲಾ ಮಕ್ಕಳಿಂದ ಸ್ಲಂ ಘೋಷಿತ ಎಂ.ಬಿ ಕಾಲೋನಿಯ ವ್ರತ್ತದಲ್ಲಿ ಮಕ್ಕಳಿಂದ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಹಾಕಿಸುತ್ತಾ ಗಮನ ಸೆಳೆದು ಮಾತನಾಡಿ “ಹಿಂದೆ ಎಷ್ಟೇ ಸಾರಿ ಲಸಿಕೆ ಕೊಡಿಸಿದ್ದರೂ ಈ ಅಭಿಯಾನದಲ್ಲಿ ತಪ್ಪದೇ ಪೋಲಿಯೊ2ಹನಿ ನಿಮ್ಮ 5ವರ್ಷದ ಮಕ್ಕಳಿಗೆ ಹಾಕಿಸಿ. ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷಿತ, ಎರಡು ಜೀವರಕ್ಷಕ ಹನಿಗಳು ಮಗುವಿನ ಬೆಳವಣಿಗೆಗೆ ಸಹಕಾರಿ ಎಂದೆಉ
2020ರಿಂದ ಭಾರತದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ ಮತ್ತು ಭಾರತ ಪೋಲಿಯೋ ಮುಕ್ತ ರಾಷ್ಟ್ರ ಘೋಷಣೆಯಾಗಿದ್ದರೂ, ವಲಸೆ ಮತ್ತು ಗಡಿ ರಾಜ್ಯ ಮತ್ತು ದೇಶ, ಪ್ರದೇಶಗಳಿಂದ ಹೊಸ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಮುಂದುವರೆದಿದೆ. ರಾಷ್ಟ್ರೀಯ ಕಾರ್ಯಕ್ರಮವು ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಮೇಲ್ವಿಚಾರಣೆ ನಡೆಯುತ್ತಿದ್ದು, ಘನ ಸರ್ಕಾರಗಳು ಹದ್ದಿನ ಕಣ್ಗಾವಲು ನಡೆಸುತ್ತಿವೆ” ಎಂದರು.
ಗ್ರಾಮದ ಪ್ರಮುಖ ಮುಖ್ಯರಸ್ತೆಯಿಂದ ಮಹೆಬೂಬಿಯಾ ಕಾಲೋನಿ ಬೀದಿಗಳಲ್ಲಿ ಶಾಲಾ ಮಕ್ಕಳು, ಸ್ಥಳೀಯರು ಮತ್ತು ಆರೋಗ್ಯ ಸಿಬ್ಬಂದಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಘೋಷಣೆ ಕೂಗುತ್ತಾ ಜಾಗೃತಿ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಉಪಕೇಂದ್ರದ ಪಿ.ಎಚ್.ಸಿ.ಓ ತ್ರೇಜಾ, ಆಶಾ ಕಾರ್ಯಕರ್ತರಾದ ಮಾಲನಬಿ, ಕಸ್ತೂರಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು


