ಮಸ್ಕಿ: ಪಟ್ಟಣದ ಪುರಸಭೆ ನೂತನ ಅಧ್ಯಕ್ಷ ಸುರೇಶ ಹರಸೂರ ಅವರಿಗೆ ಇಲ್ಲಿನ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಫುರಸಭೆ ಅಧ್ಯಕ್ಷ ಸುರೇಶ ಹರಸೂರು ಅವರು ಮಾತನಾಡಿ, ಪತ್ರಕರ್ತರ ನೂರಾರು ಸಮಸ್ಯೆಗಳಿದ್ದರು, ಅದನ್ನು ಬದಿಗೊತ್ತಿ ಸುದ್ದಿಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡುತ್ತಾರೆ. ನಿಮ್ಮ ಎನೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತನ್ನಿ ಸಾಧ್ಯವಾದಷ್ಟು ಪರಿಹರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಅಜೀಜ್, ಜಿಲ್ಲಾ ಪ್ರತಿನಿಧಿ ಪ್ರಕಾಶ ಮಸ್ಕಿ, ಪ್ರಧಾನ ಕಾರ್ಯದರ್ಶಿ ವಿಠಲ ಕೆಳೂತ್, ಹಿರಿಯ ಪತ್ರಕರ್ತ ವೀರೇಶ ಸೌದ್ರಿ, ಇಂದರಪಾಷ ಚಿಂಚರಕಿ, ರವಿ ಗೌಡನಭಾವಿ, ಅಮರೇಶ ಸಾಲಿಮಠ, ಹನುಮೇಶ ನಾಯಕ, ಹನುಮೇಶ ಬಳಗಾನೂರು, ಭದ್ರಿನಾಥ, ಅಮರೇಶ ಪತ್ತಾರ, ದುರ್ಗೇಶ ಹಸಮಕಲ್ ಸೇರಿದಂತೆ ಇನ್ನಿತರಿದ್ದರು.

