ಲಿಂಗಸಗೂರು : ಡಿ.18 – ಪಟ್ಟಣದ ಬಡಾವಣೆಯಲ್ಲಿ ನಿರ್ಮಿಸ ಲಾಗುತ್ತಿರುವ ಸಿಸಿ ರಸ್ತೆಗಳ ಮೇಲೆ ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರವು ಅತಿ ಹೆಚ್ಚಾಗಿದ್ದು, ಕೆಲವು ವಾಹನ ಚಾಲಕರು ಅತಿವೇಗದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರಿಗೆ ರಸ್ತೆ ದಾಟುವ ಸಂದರ್ಭದಲ್ಲಿ ಅಪಾಯ ಎದುರಾ ಗುತ್ತಿದ್ದು ಕೂಡಲೇ ಸಿ ಸಿ ರಸ್ತೆಗಳಲ್ಲಿ ರಬ್ಬರ್ ಹಂಪ್ಸ್ ಅಳವಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ (ರೀ) ತಾಲೂಕ ಅಧ್ಯಕ್ಷ ಜಿಲಾನಿ ಪಾಷಾ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು

ಪಟ್ಟಣದ ವಿವಿಧ ವಾರ್ಡುಗಳಲ್ಲಿ ವಿಶೇಷವಾಗಿ ಶಾಲೆ, ಅಂಗನವಾಡಿ, ದೇವಸ್ಥಾನ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ವಸತಿ ಪ್ರದೇಶಗಳ ಬಳಿ ಯಾವುದೇ ವೇಗ ನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ಅಪಘಾತಗಳು ಸಂಭವಿಸುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ರಸ್ತೆ ಗಳಲ್ಲಿ ಸೂಕ್ತ ಅಂತರದಲ್ಲಿ ರಬ್ಬರ್ ಹಂಪ್ಸ್ (ವೇಗ ನಿಯಂತ್ರಕಗಳು) ಅಳ ವಡಿಸುವುದು ಅತ್ಯಂತ ಅಗತ್ಯವಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆಗಳಲ್ಲಿ ರಬ್ಬರ್ ಹಂಪ್ಸ್ ಗಳನ್ನು ಅಳವಡಿಸಿ ಅಪಘಾತಗಳನ್ನು ತಡೆಯಬೇಕೆಂದು ಒತ್ತಾಯಿಸಿದ ಅವರು ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಪುರಸಭೆ ಕಾರ್ಯಾ ಲಯದ ಮುಂದೆ ಪ್ರತಿಭಟನೆ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಿದರು. ಈ ಸಂದರ್ಭದಲ್ಲಿ ರವಿಕುಮಾರ್ ಬರಗುಡಿ, ಅಲ್ಲಾವುದ್ದೀನ್ ಬಾಬಾ, ಮೋಷಿನ್ ಖಾನ್, ಮರಿಯಪ್ಪ ಹಟ್ಟಿ, ಅಜೀಜ್ ಪಾಷಾ, ಶಬ್ಬಿರ್ ಆಟೋ, ವೀರೇಶ್ ಐದನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *