ಸಿಂಧನೂರು : ವಯಸ್ಸಾದಂತೆ ಪ್ರತಿಯೊಬ್ಬರಿಗೂ ಹಲವು ಸಮಸ್ಯೆಗಳು ಬರುತ್ತವೆ ಮನೆಯ ಯಜಮಾನರಾಗಿದ್ದವರು ಮುಂದಿನ ಪೀಳಿಗೆಗೆ ಜವಾಬ್ದಾರಿ ನಿಭಾಯಿಸಲು ಮಾರ್ಗದರ್ಶನ ಮಾಡಿ ತಾಳ್ಮೆ ಮತ್ತು ಶಾಂತಿಯಿಂದ ಆರೋಗ್ಯದ ಕಡೆ ಗಮನ ಹರಿಸಿ ಉತ್ತಮ ಜೀವನ, ಸಂತೋಷದ ಬದುಕು ನಿಮ್ಮದಾಗಲಿ ಅಂತಾ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಶುಭ ಹಾರೈಸಿದರು
ಅವರು ನಗರದ ಮಿಲಾಪ ಶಾದಿ ಮಹಲ್‌ದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘ ತಾಲೂಕ ಘಟಕ ಹಾಗು ವೇದಿಕೆಯಿಂದ ನಿವೃತ್ತ ಹಾಗೂ ಪಿಂಚಣಿ ನೌಕರರ ದಿನಾಚರಣೆ ಹಾಗೂ 75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಗರಸಭೆ ಮಾಜಿ ಸದಸ್ಯ ಜೆ.ಡಿ.ಎಸ್.ಮುಖಂಡ ಬಸವರಾಜ ನಾಡಗೌಡ ಮಾತನಾಡಿ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿವೆ ನಾವು ಮಾಡಿದ ಆಸ್ತಿಯನ್ನು ಮಕ್ಕಳು ಮುಂದೆ ಹೇಗೆ ನಿಭಾಯಿಸುತ್ತಾರೆನ್ನುವುದು ಚಿಂತೆಯಾಗಿದೆ ಎಂದ ಅವರು ನಿವೃತ್ತಿ ಸರಕಾರಿ ನೌಕರರಿಗೆ ಇದೆ ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ ನಿವೃತ್ತಿ ಹೊಂದಿದ ನೌಕರರು ನಮ್ಮೊಂದಿಗೆ ಸಮಾಜ ಸೇವೆಗೆ ಬರುವ ಪ್ರಯುತ್ನಮಾಡಿ ಎಂದು ಹೇಳಿ ಎಳ್ಳಾಮಾಸೆ ದಿನದಂದು ಎಲ್ಲರೂ ನಮ್ಮ ಹೊಲದಲ್ಲಿ ಸಹಭೋಜನೆ ಮಾಡೋಣ ಬರಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು.
ಬಸವಶ್ರೀ ಪತ್ತಿನ ಸಹಕಾರ ಸಂಘದ 2026 ನೇ ಸಾಲಿನ ಕ್ಯಾಲೆಂಡರನ್ನು ಮಿಲಾಪ್ ಶಾದಿಮಹಲ್ ಅಧ್ಯಕ್ಷ ಕೆ. ಜಿಲಾನಿ ಪಾಷಾ ಬಿಡುಗಡೆ ಮಾಡಿದರು,
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘದ ಅಧ್ಯಕ್ಷ ಟಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದದರು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹುಡೇದ ಮಾತನಾಡಿ ಹಿರಿಯರನ್ನು ಗೌರವಿಸುವ ಉತ್ತಮ ಕಾರ್ಯ ಇದಾಗಿದೆ ಎಂದರು. ಉಪಖಜಾನೆ ಅಧಿಕಾರಿ ನಾಗರಾಜ್, ಎಸ್.ಬಿ.ಐ. ಮುಖ್ಯ ಶಾಖೆಯ ಮುಖ್ಯ ವ್ಯವಸ್ಥಾಪಕ, ಅಮೂಲ್ ಲೋಕಡಾ, ಶ್ರೀನಿವಾಸ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜೆ.ಬಾಬುರಾವ ಮ್ಯಾನೇಜರ್ ಸೂಗೂರಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಿದ್ದೇಶ್ವರಿ ಪ್ರಾರ್ಥಿಸಿದರು, ಬಸವರಾಜ್ ವಿ. ಸ್ವಾಗತಿಸಿದರು, ಹುಸೇನಬಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀರಪ್ಪ ಶಂಭೋಜಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಕುಲಕರ್ಣಿ ವಂದಿಸಿದರು.
ಗೌರವ ಸನ್ಮಾನ
ಸೂಗೂರಯ್ಯಸ್ವಾಮಿ, ಟಿ.ಅಯ್ಯಪ್ಪ, ಗಂಗಾಧರ ಕೌದಿ, ಅಮರಪ್ಪ ಬಂಗಾರಶೆಟ್ಟಿ, ಶಾಂತಾಬಾಯಿ ನಿಗಾಡೆ, ಬಸಪ್ಪ ಮುರಾಳ, ಹನುಮಂತಯ್ಯ ಗಂಧಿ, ಪ್ರಹ್ಲಾದಾಚಾರ್, ರಾಮಕೃಷ್ಣಾಚಾರ್ ಗೋನವಾರ, ಕೃಷ್ಟಾಚಾರ್, ಎಸ್.ಜಿ.ಖಾದ್ರಿ, ಮನೋಹರರಾವ್, ಯಲ್ಲಪ್ಪ, ಮಾಧವರಾವ್, ಟಿ.ಎಮ್.ಪಾಟೀಲ್, ಖಲೀಲ್ ಅಹ್ಮದ್, ಮಹ್ಮದ್ ಅಹ್ಮದ್, ಅಬ್ದುಲ್ ಖಲೀಲ, ಮಾಲಾಗೊಂಬಿ, ಶಾಂತಾಬಾಯಿ ದಾಸ್, ಜಿ.ಬಸಯ್ಯಸ್ವಾಮಿ, ಅಮರೇಗೌಡ ಕಲ್ಮಂಗಿ, ವೀರೇಶಸ್ವಾಮಿ, ಬಸನಗೌಡ ತಾವರಗೇರ ವಿವಿಧ ಇಲಾಖೆಯಲ್ಲಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ೨೪ ಹಿರಿಯ ಚೇತನಗಳಿಗೆ ಸಂಘದವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಬಡಿಬೇಸ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಂದ ಹಚ್ಚೇವು ಕನ್ನಡದ ದೀಪ್ ನೃತ್ಯ ಹಾಗೂ ಉಪ್ಪಾರವಾಡಿ ಉನ್ನತೀಕಿರಿಸಿದಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ ಗಮನಸೆಳೆದವು.

Leave a Reply

Your email address will not be published. Required fields are marked *