ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವತಿಯಿಂದ ನಡೆದ ನೀರಮಾನ್ವಿ ಮತ್ತು ಮಾಡಗಿರಿ ವಲಯದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತಾಲೂಕ ಯೋಜನಾಧಿಕಾರಿ ಸುನಿತಾ ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಂಘದ ಮೂಲಕ ಉಳಿತಾಯವನ್ನು ಮಾಡಿ ಅಗತ್ಯವಾದ ಆರ್ಥಿಕ ನೆರವಿನ ಜೋತೆಗೆ ಸಂಘದ ಗುಣಮಟ್ಟವನ್ನು ಕಾಯ್ದುಕೊಂಡು ಲಾಭಂಶವನ್ನು ಹೊಂದುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದರಿಂದ ಸ್ವಾವಲಂಬಿ ಜೀವನವನ್ನು ನಡೆಸುವುದಕ್ಕೆ ಸಾಧ್ಯ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೋತೆಗೆ ಸಂಸ್ಕಾರವನ್ನು ,ನಮ್ಮ ಸಂಸ್ಕೃತಿಯನ್ನು, ಪರಿಚಯಿಸಿದಾಗ ಮಾತ್ರ ಉತ್ತಮ ಪ್ರಜೆಗಳಾಗುವುದಕ್ಕೆ ಸಾಧ್ಯ ಎಂದು ತಿಳಿಸಿದರು.
ಅತಿ ಹೆಚ್ಚು ಲಾಭಾಂಶ ಹೊಂದಿದ ಎರಡು ಸಂಘಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು
ವಿಮಾ ಯೋಜನೆಗಳ ಬಗ್ಗೆ ರಾಯಚೂರು ಎನ್,ಆರ್.ಎಲ್.ಎಂ. ಅಧಿಕಾರಿ ನಿಂಗಪ್ಪ ಮಾಹಿತಿ ನೀಡಿದರು .ಟಿ.ಎನ್.ಓ. ತಿಮಪ್ಪ ಸಿ.ಎಸ್.ಸಿ .ಕೇಂದ್ರ ಗಳ ಬಗ್ಗೆ ಮಾಹಿತಿ ನೀಡಿದರು ನಿರಮಾನ್ವಿ ಒಕ್ಕೂಟದ ಅಧ್ಯಕ್ಷರಾದ ಯಲ್ಲಪ್ಪ, ಮಾಡಗಿರಿ ಒಕ್ಕೂಟದ ಅಧ್ಯಕ್ಷರಾದ ಸಂಗೀತ, ನಿವೃತ್ತ ಪೊಲೀಸ್ ನಿರೀಕ್ಷಕರಾದ ವೀರನಗೌಡ, ಸೇರಿದಂತೆ ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ವಿ.ಎಲ್.ಇ. ಗಳು ಸಂಘದ ನೂರಾರು ಮಹಿಳಾ ಸದಸ್ಯರು ಭಾಗವಹಿಸಿದರು.
ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ತಾ.ಯೋಜನಾಧಿಕಾರಿ ಸುನಿತಾ ಪ್ರಭು ಉದ್ಘಾಟಿಸಿದರು.

Leave a Reply

Your email address will not be published. Required fields are marked *