ತಾಳಿಕೋಟಿ: ಪಟ್ಟಣದ ಎಸ್.ಎಸ್ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ತಂತ್ರಗಳನ್ನು ತಿಳಿಸಿಕೊಡುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು. ಬ.ಸಾಲವಾಡಗಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ವಿಷಯದ ಶಿಕ್ಷಕಿ ಸುವರ್ಣ ಮಠ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ತಂತ್ರಗಳನ್ನು ತಿಳಿಸಿಕೊಡುವುದರ ಜೊತೆಗೆ ವಿಜ್ಞಾನದ ಅನೇಕ ಸೂತ್ರಗಳನ್ನು ಹೇಳಿಕೊಟ್ಟರು. ಇದೇ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷಾರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ
ಬಿ.ಎಸ್.ಸಾವಳಗಿ ಮುದ್ದೇಬಿಹಾಳ ಮತ್ತು ಸಿ.ಆರ್.ಪಿ.ಬಾಲಾಜಿ ವಿಜಾಪೂರ ಭೇಟಿ ನೀಡಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಎಲ್.ಬಿ.ಎ.ಎಪ್.ಎಲ್.
ಎನ್. 29 ಅಂಶಗಳು.ಎನ್.ಎಮ್.
ಎಮ್.ಎಸ್ ಪರೀಕ್ಷೆ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಸಾಕಷ್ಟು ಮಾಹಿತಿ ವಿವರಿಸಿದರು.ಉಪನ್ಯಾಸ ನೀಡಿದ ಸುವರ್ಣಾ ಮಠ ಇವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಕಿರಣ ಎಚ್.ಪಾಟೀಲ,ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ.ಕಟ್ಟಿ, ಹತ್ತನೇ ತರಗತಿ ವರ್ಗ ಶಿಕ್ಷಕ ಎಸ್.ಸಿ.ಗುಡಗುಂಟಿ, ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ,
ಎಸ್.ವಿ.ಜಾಮಗೊಂಡಿ,
ಎಚ.ಬಿ.ಪಾಟೀಲ, ಎಮ್.ಎಸ್.ರಾಯಗೊಂಡ, ಯು.ಎಚ.ಗಟನೂರ, ಎಸ್.ಬಿ.ಸಾಸನೂರ,ಕವಿತಾ ತೆಗ್ಗಿನಮಠ, ಕೆ.ಎನ್.ನಾಲತವಾಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *