ನವದೆಹಲಿ : ಡಿ 13 – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಪೂಜ್ಯ ಬಾಪು ಗ್ರಾಮೀಣ ರೋಜಗಾರ ಯೋಜನೆ ಯನ್ನಾಗಿ ಪುನರ್ ನಾಮಕರಣ ಮಾಡಿದೆ ಮಾನವ ದಿನಗಳ ಸಂಖ್ಯೆಯನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿದೆ ಕನಿಷ್ಠ ವೇತನವನ್ನು 240ಗಳಿಗೆ ನಿಗದಿಗೊಳಿಸಲಾಗಿದೆ ಮಾನವ ದಿನಗಳ ಮತ್ತು ಕನಿಷ್ಠ ವೇತನ ಹೆಚ್ಚಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಕೇಂದ್ರ ಸ್ಪಂದಿಸಿರುವುದು ಸ್ವಾಗತ ಅರ್ಹವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನ ಮತ್ತು ವೇತನ ಹೆಚ್ಚಳ ನಿರ್ಧಾರ ಮತ್ತೊಂದೆಡೆ ದೇಶದ ಆರ್ಥಿಕ ಬಿಕ್ಕಟ್ಟು ತೆರೆದಿಟ್ಟಂತಾಗಿದೆ ದೇಶದಲ್ಲಿ ನಿರುದ್ಯೋಗ ಅಧಿಕವಾಗಿದೆ ಎನ್ನುವುದಕ್ಕೆ ಕೇಂದ್ರದ ಈ ನಿರ್ಧಾರ ದಿಕ್ಸೂಚಿಯಾಗಿದೆ.
ದೇಶದ ಆದ್ಯೋಗಿಕ ರಂಗದಲ್ಲಿ ಉದ್ಯೋಗದ ಕೊರತೆ ಮತ್ತು ಕೃಷಿ ರಂಗದ ಮೇಲೆ ಕಾರ್ಮಿಕರ ಸಂಖ್ಯೆ ಹೆಚ್ಚಳದ ಹೊರೆ ಸ್ಪಷ್ಟ ಸೂಚಕವಾಗಿದೆ.
ಔದ್ಯೋಗಿಕ ರಂಗದಲ್ಲಿ ಉದ್ಯೋಗದ ಕೊರತೆಯಾದ್ದರಿಂದ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಳ ಹೊರಗೆ ಕಾರಣವಾಗಿದ್ದು, ಇದು ದೇಶದ ಆರ್ಥಿಕ ಅಸಮತೋಲನ ಬೆಳವಣಿಗೆಯನ್ನು ಎತ್ತಿ ತೋರಿಸಿದೆ ಉದ್ದೇಶ ಯೋಜನೆಯನ್ನು 2005ರಲ್ಲಿ ಅಂದಿನ ಯುಪಿಎ ಸರ್ಕಾರ ಅನುಷ್ಠಾನಗೊಳಿಸಿತ್ತು ಆರಂಭದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಎಂದು ನಾಮಕರಣ ಮಾಡಲಾಗಿತ್ತು ನಂತರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ಕಾಯ್ದೆಯನ್ನಾಗಿ ಮರುನಾಮಕರಣ ಮಾಡಲಾಯಿತು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
