ರಾಯಚೂರು ಡಿಸೆಂಬರ್ 11 (ಕರ್ನಾಟಕ ವಾರ್ತೆ): ಇಲ್ಲಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿವಿಧ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಕಿಟ್ಸ್ ವಿತರಣೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಮಹಿಳೆಯರಿಗಾಗಿ ಬ್ಯೂಟಿಪಾರ್ಲರ್ ಕಿಟ್ಸ್-150, ಪುರುಷ/ ಮಹಿಳೆಯರಿಗಾಗಿ ಮೊಬೈಲ್ ರಿಪೇರಿ ಕಿಟ್ಸ್-200, ಬಿದಿರು ಬೆತ್ತದ ಉತ್ಪನ್ನಗಳ ತಯಾರಿಕೆ (ಹ್ಯಾಂಡಿ ಕ್ರಾಫ್ಟ್), ಪುರುಷ/ ಮಹಿಳೆಯರಿಗಾಗಿ ದೋಭಿ ಕಿಟ್ಸ್ -150 ಸೇರಿದಂತೆ ಒಟ್ಟು 500 ಕಿಟ್ಸ್ಗಳನ್ನು ವಿತರಿಸಲಾಗುವುದು.
ದಾಖಲಾತಿಗಳು: ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ) ಕನಿಷ್ಠ 07ನೇ ತರಗತಿ ತೇರ್ಗಡೆಯಾಗಿರಬೇಕು. (ಬಿದಿರುಬೆತ್ತದ ಉತ್ಪನ್ನಗಳ ತಯಾರಿಕೆ (ಹ್ಯಾಂಡಿ ಕ್ರಾಫ್ಟ್) /ದೋಭಿ ಕಿಟ್ಸ್ಗೆ ಯಾವುದೇ ಶೈಕ್ಷಣಿಕ ಅರ್ಹತೆಯ ಅವಶ್ಯಕತೆ ಇರುವುದಿಲ್ಲ.) ಜಾತಿ ಪ್ರಮಾಣ ಪತ್ರ (ಪ.ಜಾತಿ, ಪಂ.ಪಂಗಡ & ಅಲ್ಪಸಂಖ್ಯಾತರಿಗೆ ಮಾತ್ರ). ವಿಕಲಚೇತನ/ ವಿಧವೆ ಪ್ರಮಾಣ ಪತ್ರ (ವಿಕಲಚೇತನ/ ವಿಧವೆಯರಾಗಿದ್ದಲ್ಲಿ). ಚಾಲ್ತಿಯಲ್ಲಿರುವ ಪಡಿತರ ಚೀಟಿ (ಬಿ.ಪಿ.ಎಲ್./ ಅಂತ್ಯೋದಯ) ಮತ್ತು ಆಧಾರ್ ಕಾರ್ಡ್. ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ. ವೃತ್ತಿ ದೃಢೀಕರಣ ಪತ್ರ (ಲೇಬರ್ ಕಾರ್ಡ್)/ಪಿಡಿಓ ಇವರಿಂದ ಪಡೆದ ವೃತ್ತಿ ದೃಢೀಕರಣ ಪತ್ರದೊಂದಿಗೆ ವೆಬ್‌ಸೈಟ್ ವಿಳಾಸ: https://raichur.nic.in ನಲ್ಲಿ ಡಿಸೆಂಬರ್ 31 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ) ಅವರ ಕಚೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್ ಹೈದಾರಬಾದ ರಸ್ತೆ ರಾಯಚೂರು ಇವರಿಗೆ ಕಚೇರಿಯ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *