ಬೆಳಗಾವಿ: ಡಿ 11 ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ* 2026 ಫೆ 08 ಮತ್ತು 09 ರಾಜನಹಳ್ಳಿ.. ಇಂದು ಬೆಳಗಾವಿಯಲ್ಲಿ* ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಪರಮಪೂಜ್ಯ ಡಾ.ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಜೀಗಳು,ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ರವರ ನೇತೃತ್ವದಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಧ್ಯಕ್ಷರನ್ನಾಗಿ*
ರಾಯಚೂರು ಗ್ರಾಮೀಣ ಕ್ಷೇತ್ರದ*
ಜನಪ್ರಿಯ ಶಾಸಕರು ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಸನಗೌಡ ದದ್ದಲ್ ಅವರನ್ನು ನೇಮಿಸಿ ಗೌರವಪೂರಕವಾಗಿ ಸನ್ಮಾನಿಸಲಾಯಿತು..
ಈ ಸಂದರ್ಭದಲ್ಲಿ ಶಾಸಕರುಗಳಾದ ಸನ್ಮಾನ್ಯ ಶ್ರೀ ಟಿ ರಘುಮೂರ್ತಿ,ಶ್ರೀ ಹಂಪಯ್ಯ ಸಾಹುಕಾರ, ಶ್ರೀ ಬಿ ದೇವೆಂದ್ರಪ್ಪ, ಶ್ರೀ ವೇಣುಗೋಪಾಲ ನಾಯಕ, ಶ್ರೀ ಜೆ N ಗಣೇಶ್, ಶ್ರೀ ಅನಿಲ್ ಚಿಕ್ಕಮಾದು, ಶ್ರೀ ಬಸನಗೌಡ ತುರುವಿಹಾಳ, ಶ್ರೀ ಡಾ ST ಶ್ರೀನಿವಾಸ, ರವರು ಮತ್ತು ಶ್ರೀ ಮುರಳಿ, ಶ್ರೀ ರಾಹುಲ್ ಜಾರಕಿಹೊಳ್ಳಿ ಹಾಗೂ ಸಮಾಜದ ಹಿರಿಯ ಮುಖಂಡರುಗಳು, ಹಲವು ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

