ಪರಿಸರ ಮಾಲಿನ್ಯಕ್ಕೆ ಕಾರಣವಾದ ಮಹಾನಂದ ಇಂಡಸ್ಟ್ರಿಸ್ 4ನೇ ಮೈಲ್ ಕ್ಯಾಂಪ್ ಹತ್ತಿರದ ಅನಧಿಕೃತ ಫರ್ನಿಚರ್, ಅಲಮಾರಿ, ತಯಾರಿಕಾ ಘಟಕವನ್ನು ಬಂದ್ ಮಾಡಿ, ಕ್ರಿಮಿನಲ್ ಪ್ರಕರಣ ದಾಖಲಿಸಿ, ಪರಿಸರ ಕಾಪಾಡಿ! ಜನರ ಆರೋಗ್ಯ ಉಳಿಸಿ ! ಎಂದು ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯವಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪರಿಸರ ಅಧಿಕಾರಿಗಳು, ಹಾಗೂ ಕೈಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ನಾವು ಮನವಿ ಮಾಡಿಕೊಂಡಿದ್ದೇವು.
ಮನವಿಗೆ ಸ್ಪಂದಿಸಿ, ಜಿಲ್ಲಾ ಸಹಾಯಕ ಪರಿಸರ ಅಧಿಕಾರಿಗಳು ದಿ.ಸೆ.22 ರಂದು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟವರಿಗೆ ವರದಿ ನೀಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ವರದಿ ನೀಡುವಂತೆ ಕೋರಿದ ಪ್ರಯುಕ್ತ ಅವರು ದಾಖಲೆ ಹಾಗೂ ನ.15 ರಂದು ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ್ದಾರೆ.
ವರದಿಯ ಪ್ರಕಾರ ಕಾನೂನು ವಿರೋಧಿ, ಪರಿಸರ ವಿರೋಧಿ, ಸಾರ್ವಜನಿಕ ವಿರೋಧಿ, ಮಹಾನಂದ ಇಂಡಸ್ಟ್ರಿಜ್ ಉತ್ಪಾದನಾ ಘಟಕವು ಕಾನೂನು ಬಾಹೀರ ಚಟುವಟಿಕೆ ನಡೆಸುತ್ತಿರುವುದು ವರದಿಯಿಂದ ಬಹಿರಂಗಗೊಂಡಿದೆ ಕೂಡಲೇ ಮಹಾನಂದ ಇಂಡಸ್ಟ್ರಿಜ್ ನ್ನು ಕೂಡಲೇ ಬಂದ್ ಮಾಡಿ, ಜನರ ಆರೋಗ್ಯ ಕಾಪಾಡಬೇಕು.15 ದಿನ ಗಡುವು ನೀಡಿ, ಬಂದ್ ಮಾಡದೇ ಹೋದಲ್ಲಿ ತೀವ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಆಗ್ರಹಿಸಿ, ಶಿರಸ್ತೇದಾರ್ ವಾಣಿ ಅವರಿಗೆ ಮನವಿ ಪತ್ರ ನೀಡಿ, ತಹಶೀಲ್ದಾರರ ಜೊತೆ ಗಂಭೀರವಾಗಿ ಚರ್ಚಿಸಿದ ನಂತರ ತಹಶೀಲ್ದಾರರು ಇದರ ಬಗ್ಗೆ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ತುರ್ತಾಗಿ ವರದಿ ಕಳಿಸಿ, ಮುಂದಿನ ಕ್ರಮಕ್ಕಾಗಿ ಪತ್ರ ಕಳಿಸುವುದಾಗಿ ಭರವಸೆ ನೀಡಿದರು.
ಈ ವೇಳೆ: ಸಂಚಾಲಕ ಎಂ.ಗಂಗಾಧರ, ಕನಕಪ್ಪ ಮುರಣಿ, ಹೆಚ್.ಆರ್.ಹೊಸಮನಿ, ಹನುಮಂತಪ್ಪ ಗೋಡಿಹಾಳ, ಬಸವರಾಜ ಗೋಡಿಹಾಳ, ಅಡಿವೆಪ್ಪ, ಧರಗಯ್ಯ, ಮುದಿಯಪ್ಪ, ಗೌಸ್ ಖಾನ್, ವೆಂಕೋಬ ನಾಯಕ, ಸೇರಿದಂತೆ ಇತರರಿದ್ದರು

