ಮಸ್ಕಿ : ಸೇವಾ ಜನ ಶಿಕ್ಷಣ ಸಂಸ್ಥಾನ, ಬುಡಕಟ್ಟು ಕೌಶಲ್ಯ ಕೇಂದ್ರ ರಾಯಚೂರು ವತಿಯಿಂದ
ಭಾರತ ಸರ್ಕಾರದ ಕೌಶಲಾಭಿವೃದ್ಧಿ ಹಾಗೂ ಉದ್ಯಮ ಶೀಲತಾ ಹಾಗೂ ಬುಡಕಟ್ಟು ವ್ಯವಹಾರಗಳ ಸಂಯುಕ್ತಾಶ್ರಯದಲ್ಲಿ ಇಂದು ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಮಸ್ಕಿಯಲ್ಲಿ “ರಿಪೇರಿ ಮತ್ತು ಮೆಂಟೇನೆನ್ಸ್ ಅಸಿಸ್ಟೆಂಟ್ ಸ್ಮಾರ್ಟ್ ಫೋನ್ಸ್” ವೃತ್ತಿ ಕೌಶಲಗಳ ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಆರ್ ಸಿದ್ದನಗೌಡ ತುರ್ವಿಹಾಳ ಅಧ್ಯಕ್ಷರು, ನಗರ ಯೋಜನ ಪ್ರಾಧಿಕಾರ ಮಸ್ಕಿ ಮತ್ತು ಅಧ್ಯಕ್ಷತೆಯನ್ನು ಶ್ರೀ ಸದಾನಂದ ಎಂ. ಪೂಜಾರಿ ನಿರ್ದೇಶಕರು ಜೆ ಎಸ್ ಎಸ್ ಮತ್ತು ಟಿ ಎಸ್ ಸಿ ರಾಯಚೂರ ಮತ್ತು ಉಪಸ್ಥಿತಿ ಶ್ರೀ ಮೌನೇಶ್ ನಾಯಕ್ ಯುವ ಮುಖಂಡರು ಮಸ್ಕಿ ಮತ್ತು ಶ್ರೀ ನರಸರೆಡ್ಡಿ ಮುಖ್ಯ ಅಧಿಕಾರಿಗಳು ಮಸ್ಕಿ ಮತ್ತು ಶ್ರೀ ಮಲ್ಲಯ್ಯ ಪುರಸಭೆ ಸದಸ್ಯರು ಮಸ್ಕಿ ಮತ್ತು ಶ್ರೀ ನಾಗಭೂಷಣ ಸೊಸೈಟಿ ಅಧ್ಯಕ್ಷರು ಮಸ್ಕಿ ಮತ್ತು ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರದ ವ್ಯವಸ್ಥಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಟಿ.ಎಸ್. ಸಿ ಮಸ್ಕಿ ತರಬೇತಿದಾರರಾದ ಶ್ರೀ ಪಂಪಾಪತಿ ಹೊಸಪೇಟೆ ಮಸ್ಕಿ ಮತ್ತು ಶ್ರೀ ವಿಶ್ವನಾಥ್ ಅಸಿಸ್ಟೆಂಟ್ ಪ್ರೋಗ್ರಾಮ್ ಆಫೀಸರ್ ರಾಯಚೂರ ಮತ್ತು ಚಂದ್ರಶೇಖರ್ ಬೋವಿ ಮಸ್ಕಿ ಮತ್ತು ಕಲಿಕಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಸನ್ಮಾನ್ಯ ಶ್ರೀ ಆರ್ ಸಿದ್ದನಗೌಡ ತುರ್ವಿಹಾಳ ಅವರು ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿಯನ್ನ ಸಂಪೂರ್ಣವಾಗಿ ಕಲಿತು ಮುಂದಿನ ದಿನಗಳಲ್ಲಿ ತಮ್ಮದೇ ಆದಂತ ವ್ಯವಹಾರವನ್ನು ಸೃಷ್ಟಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸಿದಾಗ ತಮ್ಮ ಕುಟುಂಬವನ್ನು ನಿಭಾಯಿಸುವ ಶಕ್ತಿ ತಮ್ಮಲ್ಲಿ ಬರುತ್ತದೆ ಮತ್ತು ದೇಶದ ಹಿತ ಶಕ್ತಿಗಾಗಿ ನಾವು ಶ್ರಮಪಟ್ಟು ದುಡಿಯಬೇಕು ಅವಾಗ ಮಾತ್ರ ಇಂಥ ಯೋಜನೆಗಳು ಯಶಸ್ವಿಗೊಳುತ್ತದೆ.
ಸರಕಾರದ ಹಲವಾರು ಯೋಜನೆಗಳು ಇದ್ದು, ವಿವಿಧ ವೃತ್ತಿ ಕೌಶಲ ತರಬೇತಿಗಳ ಕಂಪ್ಯೂಟರ, ಫೋನ್ ರಿಪೇರಿ ಇಂತಹ ತರಬೇತಿ ಪಡೆದುಕೊಂಡಾಗ ಯಶಸ್ವಿಯಾಗಬಹುದು ಕಾರಣ ಈಗಿನ ಕಾಲದಲ್ಲಿ ತಂತ್ರಜ್ಞಾನಕ್ಕೆ ತುಂಬಾ ಮಹತ್ವವಾಗಿದ್ದು ಇಂತಹ ತರಬೇತಿ ತೆಗೆದುಕೊಂಡಾಗ ಆದಾಯವು ಹೆಚ್ಚುತ್ತದೆ ಆದ್ದರಿಂದ ಎಲ್ಲರೂ ಆಸಕ್ತಿಯಿಂದ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಣದಿಂದ ಬಸ್ ಪಾಸಿನ ವ್ಯವಸ್ಥೆ ಮಾಡಿಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ವೈಯಕ್ತಿಕ ಹಣದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಪಾಸಿನ ವ್ಯವಸ್ಥೆ ಮಾಡಿಸುತ್ತೇನೆ: ಆರ್ ಸಿದ್ದನಗೌಡ ತುರ್ವಿಹಾಳ
ಕೌಶಲ್ಯ ತರಬೇತಿ ಪಡೆದುಕೊಳ್ಳುವ ವಿದ್ಯಾರ್ಥಿಗಳು ಸುಮಾರು 30 ರಿಂದ 60 ಕಿಲೋಮೀಟರ್ ದೂರದಿಂದ ಬರ್ತಕಂತ ವಿದ್ಯಾರ್ಥಿಗಳು ದಿನಕ್ಕೆ 70 ರಿಂದ 80 ರೂಪಾಯಿ ಖರ್ಚು ಆಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಈ ಸಮಸ್ಯೆಯನ್ನ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿದ್ದನಗೌಡ ತುರವಿಹಾಳ ಅವರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಸ್ವಂತ ಹಣದಿಂದ ವಿದ್ಯಾರ್ಥಿಗಳಿಗೆ ಪಾಸಿನ ವ್ಯವಸ್ಥೆ ಮಾಡುವುದಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಭರವಸೆಯನ್ನು ನೀಡಿದರು.

