ಮಕ್ಕಳಲ್ಲಿ ಬೆಳವಣಿಗೆಗೆ ಅಡ್ಡಿಯಾಗುವ ಅಪೌಷ್ಟಿಕತೆಯ ನಿವಾರಣೆಗಾಗಿ ‘ಪೌಷ್ಟಿಕ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ)’ ಗಳ ಸದುಪಯೋಗ ಪಡೆಯಿರಿ: ಡಾ ಸುನೀಲ್.
ಆಕಸ್ಮಿಕವಾಗಿ ಅಥವಾ ಇತರೆ ಕಾರಣಗಳಿಂದ ಮಗು ಅಪೌಷ್ಟಿಕತೆಗೆ ಒಳಗಾದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಅಪೌಷ್ಟಿಕತೆಯ ನಿವಾರಣೆಗಾಗಿ ಮಕ್ಕಳ ತಜ್ಞರ ಮೂಲಕ ಆರೋಗ್ಯದ ತೊಂದರೆಯನ್ನು ಗುರ್ತಿಸಿ ಪೌಷ್ಟಿಕ ಆಹಾರೊಂದಿಗೆ ಚಿಕಿತ್ಸೆಯನ್ನು ನೀಡಿ ಗುಣಪಡಿಸುವ ರಿಮ್ಸ್ ನಲ್ಲಿರುವ “ಪೌಷ್ಟಿಕ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ)” ಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಲು ಹರಿಜನವಾಡಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸುನೀಲ್ ತಾಯಂದಿರಿಗೆ ಮನವಿ ಮಾಡಿದರು.
ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗರ್ಭಿಣಿ ತಾಯಂದಿರ ತಪಾಸಣಾ ಶಿಬಿರಲ್ಲಿ ತಾಯಂದಿರು ಹಾಗೂ ಪಾಲಕರಿಗೆ ಜಾಗೃತಿ ನೀಡಿ ಮಾತನಾಡುತ್ತಾ ಮಗುವಿನ ಬೆಳವಣಿಗೆಗೆ ಅಡ್ಡಿಯಾಗುವ ಅಪೌಷ್ಟಿಕತೆಯನ್ನು ನಿವಾರಿಸಲು ಸರಕಾರವು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯ ನಾಲ್ಕನೆಯ ಮಹಡಿಯಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ) ಇದ್ದು ಇಲ್ಲಿ 14 ದಿನಗಳ ಕಾಲ ಮಗುವಿಗೆ ಪೌಷ್ಟಿಕಾಹಾರವನ್ನು ವೈಜ್ಞಾನಿಕವಾಗಿ ನೀಡಲಾಗುವುದು ಎಂದು ತಿಳಿಸಿದರು.
ಚಿಕಿತ್ಸೆ ನೀಡಲಾಗುವುದು.
ತಾಯಂದಿರಿಗೆ 14 ದಿನಗಳ ಕಾಲ ಪ್ರತಿ ದಿನಕ್ಕೆ 370/- ರೂಪಾಯಿಯಂತೆ ಎನ್‌ಆರ್‌ಎಇಜಿ ಅಡಿಯ ಕೂಲಿಗೆ ಸಮಾನವಾದ ಮೊತ್ತವನ್ನು ಸಹ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುವುದು.
ಈ ಸಂದರ್ಭದಲ್ಲಿ ದಂತ ತಜ್ಞರಾದ ಡಾ ಫೌಜೀಯಾ ಖಾಜಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಬಿಹೆಚ್‌ಇಓ ಸರೋಜಾ ಕೆ, ಫಾರ್ಮಸಿಸ್ಟ್, ಪ್ರಕಾಶ, ಎಲ್‌ಟಿಓ ಸೈಯದ್ ಖಮರುದ್ದೀನ್, ಶುಶ್ರೂಷಣಾಧಿಕಾರಿ ಲಕ್ಷ್ಮೀ, ಗಂಗಮ್ಮ, ಈರಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾದೇವಿ, ಗಿರಿಜಾ, ಮರಿಯಮ್ಮ, ಕಾಳಿಕಾದೇವಿ, ಎಲ್‌ಡಿಸಿ ಮುಜಾಹೀದ್, ಡೆಂಟಲ್ ಹೈಜನಿಸ್ಟ್ ಖಾದಿರ್ ಹುಸೇನ್ ಸೇರಿದಂತೆ ತಾಯಂದಿರು ಹಾಜರಿದ್ದರು.

