ಕೊಪ್ಪಳ ಜಿಲ್ಲೆ ಸೂಫಿ ಸಂತರ ಭಾವೈಕ್ಯದ ಪ್ರದೇಶ. ಜಿಲ್ಲೆಯ ಗಡಿ ಗ್ರಾಮದ ಬೆಳಗಟ್ಟಿಯ ಹಜರತ್ ಸಯ್ಯದ್ ಷಾ ಮುಸ್ತಫಾ ಖಾದ್ರಿ ಮಹಾತ್ಮರ ದರ್ಗಾವು ಭಾವೈಕ್ಯ ಸಾರುತ್ತ ಬಂದಿದೆ.
ಅಳವಂಡಿ ಹೋಬಳಿಯ ಬೆಳಗಟ್ಟಿ ಗ್ರಾಮದಲ್ಲಿ ಹಜರತ್ ಸಯ್ಯದ್ ಷಾ ಮುಸ್ತಫಾ ಖಾದ್ರಿ ಹಾಗೂ ಹಜರತ್ ಸಯ್ಯದ್ ಷಾ ಮುರ್ತುಜಾ ಖಾದ್ರಿ ಮಹಾತ್ಮರ ಉರುಸ್ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆತಿದ್ದು, ಸೋಮವಾರ ಉರುಸ್, ಮಂಗಳವಾರ ಜಿಯಾರತ್ ಕಾರ್ಯಕ್ರಮ ನಡೆಯಲಿದೆ.ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಂಶ ಪರಂಪರೆಯಲ್ಲಿ ಜನಿಸಿರುವ ಸಯ್ಯದ್ ಷಾ ಮುಸ್ತಫಾ ಖಾದ್ರಿ ಮಹಾತ್ಮರು. ಸುಮಾರು 200 ವರ್ಷಗಳ ಜನರ ಉದ್ಧಾರಕ್ಕಾಗಿ ಬೆಳಗಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಈ ದರ್ಗಾ ಅಂದಿನಿಂದ ಇಂದಿನವರೆಗೂ ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಶ್ರದ್ಧಾ ಕೇಂದ್ರವಾಗಿದೆ.

ಪ್ರತಿವರ್ಷವೂ ಅತಿ ವಿಜೃಂಭಣೆಯಿಂದ ಉರುಸ್ ಕಾರ್ಯಕ್ರಮ ಜರುಗುತ್ತದೆ. ಹಿಂದೂ ಮುಸ್ಲಿಂ ಸಮುದಾಯದವರು ಈ ಉರುಸ್‌ನ್ನು ಆಚರಿಸುತ್ತಾರೆ. ಮಹಾತ್ಮರ ಈ ದರ್ಗಾವು ಧಾರ್ಮಿಕ, ಸಾಮಾಜಿಕ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಗುರುತಿಸಿಕೊಂಡಿದೆ.

ಭಾನುವಾರ ಗಂಧ ಕಾರ್ಯಕ್ರಮ ನಡೆಯಿತು. ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹಜರತ್ ಅಬ್ದುಲ್ ಶಾವಲಿ ಮಹಾತ್ಮರ ದರ್ಗಾದಿಂದ ಗದುಗಿನ ಯುಸೂಫ್ ಬ್ಯಾಂಡ್ ಕಂಪನಿ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುವಾರ ಬೆಳಗಿನ ಜಾವ ದರ್ಗಾಕ್ಕೆ ತಲುಪಿತು. ಬಳಿಕ ದರ್ಗಾದ ಪೀಠಾಧಿಪತಿ ಸಯ್ಯದ್ ಶಾ ಮೆಹಬೂಬ್ ಖಾದ್ರಿ ಗುರುಗಳು ಇವರ ಅಮೃತ ಹಸ್ತದಿಂದ ‌ಮಹಾತ್ಮರ ಗದ್ದುಗೆಗೆ ಗಂಧ ಧರಿಸಲಾಯಿತು.

ಮಾ.2 ಸೋಮವಾರ (ಇಂದು) ಉರುಸ್ ಕಾರ್ಯಕ್ರಮ ಜರುಗಲಿದ್ದು, ಮಹಾತ್ಮರ ಸಂಭಾಷಣೆ, ಸುಪ್ರಸಿದ್ಧ ಖವ್ವಾಲಿ ಹಾಡುಗರಿಂದ ಕಾರ್ಯಕ್ರಮ, ರಿವಾಯತ್ ಪದಗಳು, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಮಾ.3 ಮಂಗಳವಾರದಂದು ಜಿಯಾರತ್ ಕಾರ್ಯಕ್ರಮ ನಡೆಯಲಿದೆ.

ಅನ್ವರ್ ಖಾದ್ರಿ ಹಜರತ್ ಸಯ್ಯದ್ ಷಾ ಮುಸ್ತಫಾ ಖಾದ್ರಿ ದರ್ಗಾದ ಗುರುಗಳುಉರುಸ್ ಎಂಬುದು ಸೂಫಿ ಸಂತರನ್ನು ಸ್ಮರಿಸುವ ಸೌಹಾರ್ದತೆ ಭಾವೈಕ್ಯ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಬಿತ್ತುವ ಹಬ್ಬವಾಗಿದೆ. ಹಿಂದೂ-ಮುಸ್ಲಿಂ ಸಮುದಾಯಗಳು ಒಟ್ಟಾಗಿ ಉರುಸ್ ಆಚರಣೆ ಮಾಡಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಅನ್ವರ್ ಹುಸೇನ್ ಗಡಾದ ಅಳವಂಡಿ ಗ್ರಾಮದ ಮುಖಂಡಮುಸ್ತಾಫ ಖಾದ್ರಿ ದರ್ಗಾವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ. ಪ್ರತಿಯೊಬ್ಬರು ಉರುಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಶ್ರದ್ಧಾ ಭಕ್ತಿಯಿಂದ ಉರುಸ್ ಆಚರಿಸಲಾಗುತ್ತದೆ ವಿಷ್ಣು ಹಾಳಕೇರಿ ಗ್ರಾಮದ ಮುಖಂಡಬೆಳಗಟ್ಟಿ ಗ್ರಾಮದಲ್ಲಿ ಜಾತಿ-ಮತ ಬೇಧವಿಲ್ಲದೆ ಜನರು ಒಂದೆಡೆ ಸೇರಿ ಪ್ರತಿವರ್ಷವೂ ಕೂಡ ಉರುಸ್ ಕಾರ್ಯಕ್ರಮವನ್ನು ಆಚರಿಸುತ್ತೇವೆ

Leave a Reply

Your email address will not be published. Required fields are marked *