ಲಿಂಗಸಗೂರು : ಡಿ 09 :-
ತಾಲೂಕಿನಲ್ಲಿ ಡಿಸೆಂಬರ 21ರ ಭಾನುವಾರ ದಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಶೇಕಡ 100 ರಷ್ಟು ಗುರಿ ಸಾಧಿಸಲು ಗ್ರೇಡ್ 3 ತಹಸೀಲ್ದಾರ್ ಬಸವರಾಜ ಝಳಕಿಮಠ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ .
ಇಂದು ನಡೆದ ತಾಲೂಕ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಸಿಬ್ಬಂದಿಯವರು ಈ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಜನರಿಗೆ ಸರಿಯಾದ ಮಾಹಿತಿ ನೀಡುವುದು ಮತ್ತು ಹುಟ್ಟಿದ ಮಕ್ಕಳಿಂದ ಹಿಡಿದು 5 ವರ್ಷದೊಳಗಿನ 52.195 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಿರುವ ಆರೋಗ್ಯ ಇಲಾಖೆಗೆ ಸಂಪೂರ್ಣವಾಗಿ ಸಹಕರಿಸಲು ತಿಳಿಸಿದರು.
ನಂತರ ಮಾತನಾಡಿದ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್ ಕಳೆದ 12 ವರ್ಷ ದಿಂದ ಭಾರತ ದೇಶದಲ್ಲಿ ಪೋಲಿಯೋ ಪ್ರಕರಣ ಕಂಡುಬಂದಿಲ್ಲ ವಾದರೂ ನೆರೆ ರಾಷ್ಟ್ರಗಳಲ್ಲಿ ಇನ್ನೂ ವರದಿಯಾಗುತ್ತಿರುವ ಕಾರಣ ಪಲ್ಸ್ ಪೋಲಿಯೋ ಮುಂದುವರಿದಿದೆ ಸಮುದಾಯದಲ್ಲಿ ಎಲ್ಲ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಲು ಸಂಘ ಸಂಸ್ಥೆಗಳು ಸಾರ್ವಜನಿಕರು ಕೈಜೋಡಿಸುವಂತೆ ಕೋರಿದರು. ತಾಲೂಕ ಆರೋಗ್ಯಾಧಿಕಾರಿ ಡಾ: ಅಮರೇಶ ಪಾಟೀಲ ಆರೋಗ್ಯ ಇಲಾಖೆಯ ಕ್ರಿಯಾಯೋಜನೆ ಮಾಹಿತಿ ನೀಡಿ ಒಟ್ಟು 240 ತಂಡಗಳು 480 ಕಾರ್ಯಕರ್ತರು ಒಟ್ಟು 52200 ಮಕ್ಕಳಿಗೆ ಲಸಿಕೆ ಹಾಕುವರು. 85432 ಮನೆಗಳ ಭೇಟಿ. ದೊಡ್ಡಿ ತಾಂಡಾ.ಅಲೆಮಾರಿ ಜನವಸತಿ ತಾಣಗಳು.ಬಸ್ ನಿಲ್ದಾಣಗಳಲ್ಲಿಯೂ ಪೋಲಿಯೋ ತಂಡ ಕಾರ್ಯನಿರ್ವಹಿಸುತ್ತವೆ. ಇಲಾಖೆಯ 48 ಮೇಲ್ವಿಚಾರಕರು ಭಾಗವಹಿಸುವರು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ನಾಗರತ್ನ. ಪುರಸಭೆ ಅಧಿಕಾರಿಗಳಾದ ನಟರಾಜ್. ಜಗನ್ನಾಥ. ಆರಿಫಾ.ಗದ್ದೆಪ್ಪ.ಜೆಸ್ಕಾಂ ಅಧಿಕಾರಿ ಬೆನ್ನಪ್ಪ. ಶಿಕ್ಷಣ ಇಲಾಖೆಯ ಮಹಾಂತೇಶ. ಸಾರಿಗೆ ಇಲಾಖೆಯ ಮಹಾರುದ್ರಪ್ಪ ಆರೋಗ್ಯ ಇಲಾಖೆಯ ಡಾ: ಹನುಮಂತರಾಯ ತಳ್ಳಳ್ಳಿ. ಡಾ: ಶಿವನಾಗ. ಡಾ: ಅಭಿಜಿತ್ ,ಡಾ: ನಿರ್ಮಲಾ ಪಾಟೀಲ್, ಡಾ: ರವಿಕಿರಣ,ಡಾ: ಇಕ್ಬಾಲ್ ,ಡಾ: ಸೂಗೂರೇಶ. ಅರ್ಜುನ್. ಪ್ರಾಣೇಶ್. ರಾಘವೇಂದ್ರ. ಗುರು ಪ್ರಸಾದ್. ಶಿವಲೀಲಾ ಮೇಟಿ. ಪದ್ಮಾವತಿ ನಾಯಕ್. ಬಸವಲಿಂಗ. ವಾಸೀಂ ರೆಹಮಾನ. ಇತರರು ಸಭೆಯಲ್ಲಿ ಭಾಗವಹಿಸಿದ್ದರು.

