ನರೇಗಾ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡ ಉದ್ಬಾಳ ಗ್ರಾಮದಲ್ಲಿ ಹೈಟೆಕ್ ಶೌಚಾಲಯ ಸಿ.ಡಿ. ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳ ಕಡತಗಳನ್ನು ಹಾಗೂ ಏಳು ವಾಹಿನಿ ಪುಸ್ತಕಗಳನ್ನು
ಸಹಾಯಕ ನಿರ್ದೇಶಕ ಯಂಕಪ್ಪ, ಪರಿಶೀಲಿಸಿದರು.
ಕರ ವಸೂಲಾತಿ ಕುರಿತು ಸಿಬ್ಬಂದಿ ಜೊತೆಗೆ ವಿಚಾರಣೆ ಮಾಡಿ, ನೀಡಿದ ಗುರಿಯನ್ನು ಪೂರ್ಣಗೊಳಿಸಲು ತಿಳಿಸಿ, ನರೇಗಾ ಕೂಲಿ ಕಾರ್ಮಿಕರ ಇಕೆವೈಸಿಯನ್ನು
ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿ, ಮಾನವ ದಿನಗಳು ಸೃಜನೆ ಕಡಿಮೆ ಆಗಿರುವುದರಿಂದ ಹೆಚ್ಚಿನ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡಿ, ಗುರಿಯನ್ನು ಕಡ್ಡಾಯವಾಗಿ ತಲುಪಲು ತಿಳಿಸಿದರು.
ತದ ನಂತರ ಕನ್ನಾರಿ ಗ್ರಾಮದಲ್ಲಿ ಕೂಲಿ ಕಾರ್ಮಿಕರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿ ಕಾರ್ಮಿಕರ ಜೊತೆಗೆ ಕೂಲಿ ಮೊತ್ತದ ವಿವರಣೆ ಕೇಳಿ ನರೇಗಾ ಕೂಲಿ ಕಾರ್ಮಿಕರೊಂದಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸರಿಸಮನಾದ ಕೂಲಿ 370 ಮೊತ್ತವನ್ನು ಪಡೆಯಲು ಸಲಹೆ ಸೂಚಿಸಿದರು.
ಈ ಸಂದರ್ಭದಲ್ಲಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುದಕಪ್ಪ, ಸರಸ್ವತಿ, ತಾಂತ್ರಿಕ ಸಂಯೋಜಕ ಮೆಹಬೂಬ್, ಬಿ.ಎಫ್.ಟಿ ಆಂಜನೇಯ ಬೆಳಗುರ್ಕಿ, ಜಿ.ಕೆ.ಎಮ್.ಹಾಗೂ ಪಂಚಾಯತ್ ಸಿಬ್ಬಂದಿಗಳಿದ್ದರು.


