*ಹಾಲಾಪೂರ*: ಗ್ರಾಮದ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರ ಲಾಲ್ ನೆಹರುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನೆಹರು ರವರಿಗೆ ಮಕ್ಕಳಂದರೆ ಪ್ರೀತಿ ಮಮತೆ ಅತಿವ ಸಂತೋಷವನ್ನು ಹೊಂದಿದ್ದು, ಅವರ ಸವಿನೆನಿಪಿಗೆ
ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಣೆ, ಮಕ್ಕಳಿಗೆ ಸಂಭ್ರಮ ಸಡಗರ ಹಬ್ಬ ಉತ್ಸವ ಇದ್ದಂತೆ, ಪ್ರತಿದಿನ ಪಾಠ ಕಲಿಕೆ ಇದ್ದೇ ಇರುತ್ತದೆ ಅದಕ್ಕಾಗಿ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಮೂರು ದಿನಗಳಿಂದ ಮಕ್ಕಳಿಗೆ ವಿವಿಧ ಸ್ಪರ್ಧೆಗಳಾದ ರಂಗೋಲಿ, ಕಥೆ, ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ, ಚದ್ಮವೇಶ, ಗಾಯನ, ಭರತನಾಟ್ಯ ಹಾಗೂ ಇನ್ನಿತರ ಸ್ಪರ್ಧಿಗಳನ್ನು ಏರ್ಪಡಿಸಿ ಮಕ್ಕಳಿಗೆ ಮತ್ತು ಪಾಲಕರಿಗೆ ಅಭಿನಂದಿಸಿ ಪ್ರಶಸ್ತಿ ಪತ್ರವನ್ನು ನೀಡುವ ಮೂಲಕ ಮಕ್ಕಳ ಕಲಿಕೆಗೆ ಮತ್ತಷ್ಟು ಪ್ರೋತ್ಸಾಹಿಸುವ ವೇದಿಕೆ ನಿರ್ಮಿಸಿ ಮಕ್ಕಳಲ್ಲಿ ಅಡಗಿರುವ ವಿವಿಧ ಬಗೆಯ ಪ್ರತಿಭೆಯನ್ನು ಪ್ರದರ್ಶಿಸಿಸಿ ತಮ್ಮ ಶಕ್ತಿ ಸಾಮರ್ಥ್ಯವನ್ನು ಶಿಕ್ಷಕರಿಗೆ ಪಾಲಕ ಪೋಷರಿಗೆ ಸಂಭ್ರಮಿಸಿದರು . ಈ ಸಂದರ್ಭದಲ್ಲಿ ಶಾಲಾ ಉಪಾಧ್ಯಕ್ಷರಾದ ಕೆ ಶೇಖರಪ್ಪ, ಪ್ರೌಢಶಾಲಾ ಮುಖ್ಯಗುರು ರವಿಕುಮಾರ ತೋರಣದಿನ್ನಿ, ಪ್ರಾಥಮಿಕ ಶಾಲಾ ವಿಭಾಗ ಮುಖ್ಯಗುರು ಕುಮಾರ ಮಸ್ಕಿ, ಶಿಕ್ಷಕರಾದ ಕುಪ್ಪಣ್ಣ, ಕೃಷ್ಣಮೂರ್ತಿ ಹಾಗೂ ನರ್ಸರಿ ವಿಭಾಗ, ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಶಿಕ್ಷಕಿಯರು ಇದ್ದರು. ಮಕ್ಕಳ ಕಾರ್ಯಕ್ರಮಕ್ಕೆ ಪಾಲಕರು ಪೋಷಕರು ಸಾಕ್ಷಿಯಾದರು.
