ಸಿಂಧನೂರು: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಲಯ ಸಿಂಧನೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಗುಂದ ಇವರ ಸಂಕ್ತಾಶ್ರಯದಲ್ಲಿ ಮುಕ್ಕುಂದಾ ಗ್ರಾಮದಲ್ಲಿ ಏರ್ಪಡಿಸಲಾದ ಪ್ರಜಾ ಸೇವಾ ಆಂದೋಲನದ ಕಾರ್ಯಕ್ರಮದ ನಿಮಿತ್ತ ಬಂದಂತ ಸಾರ್ವಜನಿಕರಿಗೆ ಸಕ್ಕರೆ ಖಾಯಿಲೆ ಪರೀಕ್ಷಿಸಿ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಅಯ್ಯನಗೌಡ ತಾಲೂಕು ಅರೋಗ್ಯಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವರು ಮಾತನಾಡಿ ಪ್ರತಿ ವರ್ಷ ನವೆಂಬರ್ 14 ರಂದು”ವಿಶ್ವ ಮದುಮೇಹ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮದುಮೇಹ (ಸಕ್ಕರೆ ಖಾಯಿಲೆ )ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮಾಡಿಸುವುದು ಅದರ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಬಗ್ಗೆ ಶಿಕ್ಷಣ ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ನವೆಂಬರ್ 14 -1922 ರಲ್ಲಿ ಚಲ್ಸ್ ಬೆಸ್ಟ್ ಅರೊಂದಿಗೆ ಸೇರಿ ಇನ್ಸೂಲಿನ ಅನ್ನು ಕಂಡುಹಿಡಿದು ವಿಜ್ಞಾನಿ ಸರ್ ಫ್ರೆಡ್ರಿಕ್ ಬ್ಯಾಟಿಂಗ್ ಅರವರ ಜನ್ಮ ದಿನದ ಸವಿನೆನಪಿಗಾಗಿ ನವೆಂಬರ್ 14ರಂದು ಮದುಮೇಹ ದಿನಾಚರಣೆ ಆಯ್ಕೆ ಮಾಡಿದರು. ಮದುಮೇಹ ಖಾಯಿಲೆಯೂ ದೇಹದಲ್ಲಿ ಇನ್ಸೂಲಿನ ಉಪಾದನೆ ಸಂಪೂರ್ಣವಾಗಿ ನಿಲ್ಲುವುದು ಅಥವಾ ಕಡಿಮೆಯಾಗುವುದು ಟೈಪ್ 1, ಟೈಪ್ 2- ಮದುಮೇಹ ದೇಹದಲ್ಲಿ ಉತ್ಪತಿಯಾಗುವ ಇನ್ಸೂಲಿನ ಅನ್ನು ಜೀವಕೋಗಳು ಸರಿಯಾಗಿ ಬಳಸಿಕೊಳ್ಳದಿರುವದು (ಇದು ಹೆಚ್ಚು ಜನರಲ್ಲಿ ಕಂಡುಬರುತ್ತದೆ )ಗರ್ಭವಸ್ಥೆಯಲ್ಲಿ ಮದುಮೇಹ ಗರ್ಭಿಣಿಯರಲ್ಲಿ ತಾತ್ಕಾಲಿಕವಾಗಿ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗುವುದು. ಅತಿಯಾದ ದಾಹ, ಪದೇಪದೇ ಮೂತ್ರ ವಿಸರ್ಜನೆ, ಸುಸ್ತು /ನಿಶ್ಯಕ್ತಿ, ದಿಡೀರ್ ತೂಕ ಇಳಿಕೆ, ಗಾಯಗಳು ತಡವಾಗಿ ಗುಣವಾಗುವುದು. ಈ ಖಾಯಿಲೆಯನ್ನು ಹೇಗೆ ನಿಯಂತ್ರಿಸಿಕೋಬೇಕು ಎಂದರೆ ಸಕ್ಕರೆ, ಜಂಕ ಫುಡ್, ಹಾಗೂ ಸಂಸ್ಕರಿಸಿದ ಆಹಾರವನ್ನು ಕಡಿಮೆ ಮಾಡಿ ತರಕಾರಿ, ಹಣ್ಣು, ಸೊಪ್ಪು, ಮತ್ತು ನಾರಿನಂಶವಿರುವ ಧನ್ಯವಾದಗಳನ್ನು ಸೇವಿಸುವುದು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಶ್ರಮದಾಯಕ ವ್ಯಾಯಾಮ ನಡಿಗೆ ಅಥವಾ ಯೋಗ ಮಾಡುವುದು. ನಿಯಮಿತವಾಗಿ 30ವರ್ಷ್ ದಾಟಿದ ನಂತರ ರಕ್ತದ ತಪಾಸಣೆ ಮಾಡಿಸಿಕೊಳ್ಳಬೇಕು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಲಕಾಲಕ್ಕೆ ಪರೀಕ್ಷಿಸಿಕೊಳ್ಳಬೇಕು ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು ಮತ್ತು ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಆಂಜನೇಯ ಆಡಳಿತ ವೈದ್ಯಾಧಿಕಾರಿಗಳು ಧಡೆಸೂಗೂರ, ಡಾ. ಲಷ್ಮಿ ಕಣಕಿ ಆಯುಷ್ ವೈದ್ಯಾಧಿಕಾರಿಗಳು ಸಾಲಗುಂದ, ಗೀತಾ ಹಿರೇಮಠ್ ತಾಲೂಕು BHEO, PHCO ರವರದಾ ವಿಜಯಲಷ್ಮಿ, ಸರಸ್ವತಿ, ಅಂಬಮ್ಮ, ರೇಣುಕಾ, CHO ರವರದಾ, ರವಿ ನಾಯಕ್, ಸಂತೋಷ, ವಿರೇಶ್, ರೆಡ್ದೆಪ್ಪಗೌಡ, HIO ಹನುಮಂತ ರೆಡ್ಡಿ, ಆಶಾ ಕಾರ್ಯಕರ್ತೆಯರುಗಳಾದ, ಯಮನಮ್ಮ, ನಿರ್ಮಲ, ನಾಜು ಬೇಗಂ, ರೇಖಾ, ಈರಮ್ಮ, ಜರಿನಾ. ಸಾರ್ವಜನಿಕರು ಉಪಸ್ಥಿತರಿದ್ದರು.
