ಸಿಂಧನೂರು – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಹ್ಯಾಪಿ ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಗರದ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಸ್ಕೂಲ್ ನ ಎಲ್ಲಾ ಮಕ್ಕಳು ಆಗಮಿಸಿ ಪೋಷಕರಿಂದ ಸಂಗ್ರಹಿಸಲ್ಪಟ್ಟ ಆಹಾರ ವಸ್ತುಗಳನ್ನು ವಿತರಿಸಿ ಆಶ್ರಮದಲ್ಲಿನ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರ ಜೊತೆ ಈ ಕತ್ತರಿಸುವ ಮೂಲಕ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹ್ಯಾಪಿ ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಸಂಸ್ಥಾಪಕರಾದ ಮುರಳಿ ಕೃಷ್ಣ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹ್ಯಾಪಿ ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕರಾದ ಮುರಳಿ ಕೃಷ್ಣ ಮಾತನಾಡಿ ಮಕ್ಕಳಿಗೆ ಭಾರತದ ಬಂಧುತ್ವದ ಸಂಸ್ಕಾರದ ಶಿಕ್ಷಣವನ್ನು ನೀಡಬೇಕೆನ್ನುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಇಂದಿನ ಈ ಮಕ್ಕಳು ಮುಂದಿನ ಭಾರತ ದೇಶದ ಭದ್ರಬುನಾದಿಯಾಗಿ ನಮ್ಮ ದೇಶವನ್ನು ಮತ್ತು ನಮ್ಮ ದೇಶದ ಪರಂಪರೆ ಇತಿಹಾಸವನ್ನು ಉಳಿಸುವಂತಹ ಉತ್ತಮ ಪ್ರಜೆಗಳಾಗಲಿ ಇಂದಿನ ದಿನಗಳಲ್ಲಿ ಶಿಕ್ಷಣವು ಅವರ ಬದುಕಿಗಾಗಿ ಅಷ್ಟೇ ಅಲ್ಲದೆ ಸಮಾಜಕ್ಕಾಗಿಯೂ ಕೂಡ ಶಿಕ್ಷಣ ಬೇಕೆನ್ನುವುದು ಈ ಪುಟ್ಟ ಮಕ್ಕಳಿಗೆ ಅರಿವಾಗಲಿ ಎನ್ನುವ ಉದ್ದೇಶದಿಂದ ನಾವು ಕಾರುಣ್ಯ ಆಶ್ರಮದಲ್ಲಿ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಂಡಿದ್ದೇವೆ. ಇಲ್ಲಿರುವಂಥ ಎಲ್ಲಾ ಹಿರಿಯರು ಹಾಗೂ ಬುದ್ಧಿಮಾಂದ್ಯರನ್ನು ಕಂಡ ಈ ಪುಟ್ಟ ಮಕ್ಕಳು ಅವರೆಲ್ಲರಿಗೆ ಪ್ರೀತಿಯ ಮೊಮ್ಮಕ್ಕಳಾಗಿ ನಲಿಯುತ್ತಿರುವ ಈ ಸುಂದರ ಕ್ಷಣಗಳು ಪೋಷಕರು ಕೂಡ ಗೌರವಿಸಿದ್ದಾರೆ. ಪಂಡಿತ್ ಜವಾಹರ್ ಲಾಲ್ ನೆಹರು ಅವರು ಮಕ್ಕಳಿಗಾಗಿ ಮತ್ತು ಮಕ್ಕಳ ಹಕ್ಕು ಹಾಗೂ ಪೋಷಕರ ಜವಾಬ್ದಾರಿಗಾಗಿ ಅಂದಿನ ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಘೋಷಣೆ ಮಾಡಿರುವುದು ಅವರ ನಿಲುವನ್ನು ಇಡೀ ವಿಶ್ವ ಸ್ವಾಗತಿಸಿದೆ. ನೆಹರು ಅವರ ಆದರ್ಶ ಮಾರ್ಗದರ್ಶನವೇ ನಮ್ಮೆಲ್ಲರಿಗೆ ಹಾಗೂ ಮಕ್ಕಳ ಸ್ಪೂರ್ತಿಯಾಗಿದೆ ಎಂದು ಮಾತನಾಡಿ ಆಶ್ರಯವಾಸಿಗಳೊಂದಿಗೆ ಸ್ವಲ್ಪ ಹೊತ್ತು ಮನರಂಜನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಾಂಭವಿ ಪುಣ್ಯಾಶ್ರಮದ ಪೀಠಾಧಿಪತಿಗಳಾದ ವೇದಮೂರ್ತಿ ವೀರೇಶ ಯಡಿಯೂರು ಮಠ ಈಗಿನ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರದ ಬುನಾದಿ ಗಟ್ಟಿಯಾಗಬೇಕು. ಅಂದಾಗ ಇವರು ಪಡೆದಿರುವಂತಹ ಶಿಕ್ಷಣಕ್ಕೆ ಮಹತ್ವ ಸಿಗುತ್ತದೆ. ಮಕ್ಕಳ ದಿನಾಚರಣೆಯ ಈ ಶುಭದಿನದಂದು ಕಾರುಣ್ಯ ಆಶ್ರಮದಲ್ಲಿರುವ ಎಲ್ಲಾ ಹಿರಿಯರು ಕೂಡ ನಮ್ಮ ತಂದೆ ತಾಯಿಗಳ ಸಮಾನರು ಎನ್ನುವ ಮನೋಭಾವನೆ ಇವರೆಲ್ಲರಲ್ಲಿ ಬೆಳೆಯಬೇಕು. ಇಂದಿನ ಈ ಕಾರ್ಯಕ್ರಮದ ಹ್ಯಾಪಿ ಕಿಡ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು ಅರ್ಥಪೂರ್ಣ ಮಕ್ಕಳ ದಿನಾಚರಣೆ ಆಚರಿಸಿದೆ. ಈ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿಯ ಪಾಠವನ್ನು ಮಾಡುತ್ತಿರುವುದು ಸಮಾಜದ ಆದರ್ಶ ಕಾರ್ಯವಾಗಿದೆ ಎಂದು ಆಶಿರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಹ್ಯಾಪಿ ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿಗಳಾದ ರಾಧಿಕಾ ಶಿಕ್ಷಕರುಗಳಾದ ಉಷಾ.ವಿಜಯಾ.ಖದಿಜಾ. ಸಾನಿಯಾ.ಸಾವಿತ್ರಿ. ಸಭಾ. ಬಸಮ್ಮ. ಸ್ವಾತಿ. ಭಾರತಿ. ಚೈತ್ರಾ. ಸಿಬ್ಬಂದಿಗಳಾದ ರಂಜಾನ್. ಶ್ರವಣ್. ಹುಸೇನಿ. ನಾಗರತ್ನ.ಹಸೀನಾ.ಸನಾ. ಶಾಹಿನ್. ಹಾಗೂ ಪತ್ರಕರ್ತರುಗಳಾದ ಬಂದೇನವಾಜ್ ವಿಜಯ ಮತ್ತು ವೀರಭದ್ರಗೌಡ ಗಿಣಿವಾರ ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸದಸ್ಯರಾದ ಸುಜಾತ ಹಿರೇಮಠ. ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ.ಮರಿಯಪ್ಪ. ವಿದ್ಯಾಶ್ರೀ. ಶಂಕ್ರಮ್ಮ. ಶರಣು ಸ್ವಾಮಿ. ಬಸವ ಸ್ವಾಮಿ. ಹಾಗೂ ಹ್ಯಾಪಿ ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಎಲ್ಲಾ ಪುಟ್ಟ ಪುಟ್ಟ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *