ಕಂಪ್ಲಿ:
ಮಕ್ಕಳ ಉಜ್ವಲ ಭವಿಷ್ಯ ಹಾಗೂ ಶಾಲೆಯ ಮೂಲಸೌಕರ್ಯದ ಪ್ರಗತಿಗೆ ಪೂರಕವಾಗಿ ಇಲ್ಲಿನ ಎಂ.ಡಿ. ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ (SDMC) ಹೊಸ ರಕ್ತ ತುಂಬಲಾಗಿದೆ. ಬುಧವಾರ ನಡೆದ ಮಹತ್ವದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಗಂಗಾಧರ ಹಾಗೂ ಉಪಾಧ್ಯಕ್ಷರಾಗಿ ಸುನಿತಾ ಅವರು ಸರ್ವಾನುಮತದಿಂದ ಅಯ್ಕೆಯಾಗಿದ್ದಾರೆ.
ಪಟ್ಟಣದ 22ನೇ ವಾರ್ಡ್‌ನಲ್ಲಿರುವ ಈ ಶಾಲೆಯ ಆವರಣದಲ್ಲಿ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣಾಭಿಮಾನಿಗಳ ಸಮ್ಮುಖದಲ್ಲಿ ಸಭೆ ಜರುಗಿತು. ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳ ಜೊತೆಗೆ ಒಟ್ಟು 16 ಜನ ಉತ್ಸಾಹಿ ಸದಸ್ಯರ ಬಲಿಷ್ಠ ತಂಡವನ್ನು ಒಮ್ಮತದಿಂದ ರಚಿಸಲಾಯಿತು.
*ಸದಸ್ಯರ ಬಳಗ:*
ಸಮಿತಿಯ ನೂತನ ಸದಸ್ಯರಾಗಿ ಸುರೇಶ, ಶಂಕರ್, ಚಿನ್ನ ರಾಮುಡು, ಅಂಜಿ, ವೆಂಕಟೇಶ, ರಾಮಾಂಜಿನಿ, ಆನಂದ, ರೇಣುಕಾ, ಯಶೋಧಾ, ಲಕ್ಷ್ಮಿ, ನೀಲಮ್ಮ, ಹುಲಿಗೆಮ್ಮ, ಕೃಷ್ಣವೇಣಿ, ಹುಲಿಗೆಮ್ಮ, ಶಬೀನಾ ಬಾನು ಮತ್ತು ಸಣ್ಣ ಮೂರ್ತಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮಾಲಾರ್ಪಣೆ, ಹೂಗುಚ್ಛ ನೀಡಿ ಗೌರವ: ಆಯ್ಕೆಯಾದ ತಕ್ಷಣವೇ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಹೂಮಾಲೆ ಹಾಕಿ, ಶಾಲೆಯ ಪ್ರಗತಿಗೆ ಒಟ್ಟಾಗಿ ಶ್ರಮಿಸುವಂತೆ ಹಾರೈಸಿ ಗೌರವಿಸಲಾಯಿತು.
ಈ ಸಮಿತಿ ರಚನೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ದೊಡ್ಡ ಬಸಪ್ಪ, ಪುರಸಭೆಯ ಮಾಜಿ ಸದಸ್ಯ ಆಂಜನೇಯ, ಶಾಲೆಯ ಮುಖ್ಯಶಿಕ್ಷಕಿ ನಾಗರತ್ನ ಹಾಗೂ ಸಹ ಶಿಕ್ಷಕರು ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *