ಸಿಂಧನೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಸಿಂಧನೂರು ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಐದು ವರ್ಷಗಳ ಅವಧಿಗೆ ಗುರುವಾರ ನವೆಂಬರ್‌ ೫ ರಂದು ನಿವೃತ್ತ ನೌಕರರ ಸಭಾಭವನದಲ್ಲಿ ಟಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು ಎಂದು ನೂತನ ಪ್ರಧಾನ ಕಾರ್ಯರ್ಶಿ ಹುಸೇನ್‌ಬಾಷಾ ತಿಳಿಸಿದ್ದಾರೆ.
ಗೌರವ ಅಧ್ಯಕ್ಷರಾಗಿ ಟಿ.ಅಯ್ಯಪ್ಪ, ಅಧ್ಯಕ್ಷರಾಗಿ ಬಸವರಾಜ ವಿ., ಉಪಾಧ್ಯಕ್ಷರಾಗಿ ಹನುಮಂತಯ್ಯ ಗಂಧಿ, ಸಿದ್ದೇಶ್ವರಿ ಪ್ರಧಾನ ಕಾರ್ಯದರ್ಶಿಯಾಗಿ ಹುಸೇನಬಾಷಾ, ಖಜಾಂಚಿಯಾಗಿ ಬಸವರಾಜ ಬಿ. ಸಂಘಟನಾ ಕಾರ್ಯದರ್ಶಿಯಾಗಿ ಅಮರೇಶ, ಸುಮಿತ್ರಾ ಹಿರೇಮಠ, ಸಹ ಕಾರ್ಯದರ್ಶಿಗಳಾಗಿ ಪ್ರಭು ಶಂಭೆವಾಡ, ಚಂದ್ರಶೇಖರ ಕಗ್ಗೋಡ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬೀರಪ್ಪ ಶಂಭೋಜಿ ಕ್ರೀಡಾ ಕಾರ್ಯದರ್ಶಿಯಾಗಿ ಶೇಕ್‌ನಬಿ, ಆಂತರಿಕ ಲೆಕ್ಕಪರಿಶೋಧಕರಾಗಿ ಅಂಬಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾರಾಯಣಸ್ವಾಮಿ, ಅಜಮೀರ್‌ಪಾಷಾ, ಚಂದ್ರಕಲಾ ಮತ್ತು , ನಾಮ ನಿರ್ದೇಶನ ಸದಸ್ಯರುಗಳನ್ನಾಗಿ ಶಾಂತರಾಜ, ಶರ್ಪುದ್ಧೀನ್‌, ಮಹ್ಮದ್‌ ಅವರನ್ನು ನೇಮಕ ಮಾಡಲಾಯಿತು ೨೫ ವರ್ಷಗಳ ವರೆಗೆ ತಾಲೂಕ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ನಿವೃತ್ತ ನೌಕರರ ಸಂಘದ ಎಲ್ಲ ಸದಸ್ಯರುಗಳಿಗೆ ಟಿ.ಅಯ್ಯಪ್ಪ ಮತ್ತು ಪ್ರಸ್ತುತ ನೂತನ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟ ಸದಸ್ಯರುಗಳಿಗೆ ಬಸವರಾಜ ವಿ. ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *