ಕವಿತಾಳ :
ತುಂಗಭದ್ರಾ ಎಡದಂಡೆ ಕಾಲುವೆಯ 69ನೇ ಉಪ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಇತ್ತಿಚೇಗೆ ಕವಿತಾಳ ನೀರಾವರಿ ಇಲಾಖೆ ಕಛೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು ಆಗ ಸ್ಥಳದಲ್ಲಿದ್ದ ಎಇಇ ಈಶ್ವರ ಅವರು ಸಮರ್ಪಕವಾಗಿ ನೀರು ಬಿಡುವ ಬರವಸೆಯನ್ನು ನೀಡಿದ್ದರು ಆದರೇ ಈಗ ನೀರು ಸರಿಯಾಗಿ ಬಿಡುತ್ತಿಲ್ಲ ಹೀಗಾಗಿ ಬತ್ತದ ಬೆಳೆಗಳು ಒಣಗುತ್ತಿವೆ ಅಧಿಕಾರಿಗಳು ಬರವಸೆಯಂತೆ ನೀರು ಹರಿಸದ ನಡೆಯನ್ನು ಖಂಡಿಸಿ ಇಂದು 69ನೇ ಮೈಲ್ ಕಾಲುವೆ ಬಳಿ ರೈತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
`೬೯ನೇ ಉಪ ಕಾಲುವೆಗೆ ನೀರು ಪೂರೈಸುವ ಗೇಜ್ ಎತ್ತರಿಸಿದ್ದರೂ ಅಧಿಕಾರಿಗಳು ಕಳ್ಳಾಟ ನಡೆಸಿ ಗೇಜ್ ಕೆಳಗೆ ತಟ್ಟಿನ ಚೀಲಗಳನ್ನು, ಭತ್ತದ ಹುಲ್ಲು, ಕಸ ಕಡ್ಡಿ ಹಾಕಿ ನೀರು ಹರಿಯದಂತೆ ತಡೆಯುತ್ತಿದ್ದಾರೆ, 69ನೇ ಉಪ ನಾಲೆಗೆ ಪೂರೈಸಬೇಕಿದ್ದ ನೀರನ್ನು ಕದ್ದು ಮುಂದಿನ 76ನೇ ಕಾಲುವೆಗೆ ಬಿಡಲಾಗುತ್ತಿದೆ ನೀರು ಬರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದ ರೈತರು ಗೇಜ್ ನೋಡಿದಲ್ಲಿ ಸರಿಯಾಗಿದೆ ಆದರೇ ನೀರು ಬರುತ್ತಿಲ್ಲ ಎಂಬ ಅನುಮಾನದ ಮೇಲೆ ಕಾಲುವೆ ಹತ್ತಿರ ಬಂದು ಗೇಜ್ ಪರಿಶಿಲಿಸಿದಾಗ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ, ಈ ರೀತಿಯಾಗಿ ಸುಳ್ಳು ಬರವಸೆ ನೀಡಿ ರೈತರಿಗೆ ಮೋಸಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅದುವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು ಮತ್ತು ನಾಳೆೆಯಿಂದ ನಮ್ಮ ಮನೆಯ ಮಹಿಳೆಯರು ಮತ್ತು ಮಕ್ಕಳು ಸೇರಿ ಪ್ರತಿಭಟನೆಯನ್ನು ಇನ್ನಷ್ಟು ತೀರ್ವಗೊಳಿಸುವುದಾಗಿ’ ರೈತರು ಎಚ್ಚರಿರಿಸಿದ್ದಾರೆ.

`ಕಾಲುವೆ ಮೇಲೆ ನಿಷೇದಾಜ್ಞೆ ಜಾರಿಯಲ್ಲಿದ್ದು ಪ್ರತಿಭಟನೆ ನಡೆಸದಂತೆ ಕವಿತಾಳ ಠಾಣಾ ಪಿಎಸ್‌ಐ ಅಜ್ಮೀರ್ ಅವರು ಮನವಿ ಮಾಡಿದರು, ಆದರೇ ಇತ್ತಿಚೆಗೆ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಪೂರೈಸಲು ಕ್ರಮಕೈಗೊಳ್ಳುವ ಬರವಸೆಯನ್ನು ಇಲಾಖೆ ಕಛೇರಿಗೆ ಮುತ್ತಿಗೆ ಹಾಕಿದಾಗ ನೀವು ನೀಡಿದ್ದಿರಿ ತಮ್ಮ ಮಾತು ಕೇಳಿಕೊಂಡು ನಾವು ಸುಮ್ಮನಿದ್ದೆವು ಇದೀಗ ಅಧಿಕಾರಿಗಳ ಮೋಸದಾಟ ಬಯಲಾಗಿದ್ದು ಅವರ ವಿರುದ್ಧ ತಾವು ಏನು ಕ್ರಮ ಕೈಗೋಳ್ಳುವಿರಿ ಎಂದು ಪ್ರಶ್ನಿಸಿ ಪ್ರತಿಭಟನೆಯನ್ನು ತಡೆಯಬೇಡಿ ಎಂದು ಹೇಳಿದರು.

69ನೇ ಕಾಲುವೆಗೆ ಹೆಚ್ಚಿನ ನೀರು ಹರಿಸುವ ಉದ್ದೇಶದಿಂದ ಇಂತಹ ಕೆಲಸ ಮಾಡಿರುವ ಅಧಿಕಾರಿಗಳು ಹಲವಾರು ವರ್ಷಗಳಿಂದ ಇಲ್ಲಿಯೇ ಬೇರುರಿದ್ದು ಲಂಚದ ಆಸೇಗಾಗಿ 76ನೇ ಕಾಲುವೆಗೆ ಹೆಚ್ಚಿನ ನೀರು ಹರಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಅದು ನಮಗೆ ಗೊತ್ತಿದೆ ನಮಗೆ ನ್ಯಾಯಯುತವಾಗಿ ಬರುವಷ್ಟು ನೀರನ್ನು ಅಧಿಕಾರಿಗಳು ನೀಡಬೇಕು ಮತ್ತು ಇಂತಹ ಕೆಲಸ ಮಾಡುತ್ತಿರುವ ನೀರಾವರಿ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಈಶಪ್ಪಗೌಡ, ಶರಣಪ್ಪಗೌಡ ತೋರಣದಿನ್ನಿ, ಶಿವು ಪಾಟೀಲ್, ಮಹಾಂತೇಶ್ ಗೌಡ, ಮಲ್ಲನಗೌಡ, ನರಸಪ್ಪ ಮೈಲಾರಿ, ಶಿವಬಸಪ್ಪ, ನಾಗಪ್ಪ ಚಿಕ್ಕದಿನ್ನಿ, ಬಸವರಾಜ, ಮಲ್ಲಯ್ಯ ಸಾಹುಕಾರ್,ಬಸವರಾಜ ರಮೇಶ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *