ತಾಂಡವಪುರ ನವಂಬರ್ 5 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೈಸೂರು ಊಟಿ ರಸ್ತೆ ಕೆಎನ್ ಹುಂಡಿ ಗ್ರಾಮದ ಬಳಿ ಇರುವಎಚ್ ಅಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ಸ್ ಕಂಪನಿಯ
ನೌಕರನನ್ನು ಯಾವುದೇ ತಪ್ಪು ಮಾಡದೆ ಇರುವ ನೌಕರನನ್ನು ಏಕಾಏಕಿ ಕೆಲಸದಿಂದ ನಿಲ್ಲಿಸಿ ಆತನ ಕುಟುಂಬದ ವರ್ಗದವರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿರುವ ಕಂಪನಿಯವರು ಮತ್ತೆ ಕೆಲಸಕ್ಕೆ ನವಂಬರ್ 20ರ ಒಳಗೆ ತೆಗೆದುಕೊಂಡು ಕಾಯಂ ಉದ್ಯೋಗ ನೀಡಬೇಕು ಇಲ್ಲವಾದರೆ ಕಂಪನಿ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮುಖಂಡರ ಎಚ್ಚರಿಕೆ ನೀಡಿದ್ದಾರೆ ಗ್ರಾಮದ ನೌಕರನನ್ನು ಬೆಂಬಲಿಸಿ ಗ್ರಾಮಸ್ಥರು ಮತ್ತು ರೈತ ಸಂಘದ ಮುಖಂಡರು ಕಂಪನಿ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ಚಳುವಳಿ ಹಮ್ಮಿಕೊಂಡು ಪೊಲೀಸರ ಮಧ್ಯಸ್ಥಿಕೆಯಲ್ಲಿ ಇಂದು ನಡೆದ ಕಂಪನಿ ಅಳಿದು ವರ್ಗ ಮತ್ತು ಮುಖಂಡರ ನಡುವೆ ನಡೆದ ಸಭೆಯಲ್ಲಿ ಆಳಿತು ವರ್ಗದವರು ನಮ್ಮ ಕಂಪನಿಯ ಮಾಲೀಕರ ಜೊತೆ ಈ ಬಗ್ಗೆ ಚರ್ಚೆ ಮಾಡಿ ಇದಕ್ಕೆ 20ನೇ ತಾರೀಖಿನೊಳಗೆ ನಾವು ನಿಮಗೆ ತಿಳಿಸುತ್ತೇವೆ ಎಂದು ಹೇಳಿದರು ಇದಕ್ಕೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತುಕತೆ ನಡೆದು ಇದೇ ತಿಂಗಳು 20ರ ಒಳಗೆ ನಿಲ್ಲಿಸಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಆತನಿಗೆ ಕಾಯಂ ಉದ್ಯೋಗ ನೀಡಬೇಕು ಆತನು ಸುಮಾರು 18 ವರ್ಷಗಳಿಂದ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದಾನೆ ಇವನು ಸೇರಿದ ಮೇಲೆ ಬಂದಂತ ನೌಕರರನ್ನು ಖಾಯಂ ಆಗಿ ಮಾಡಿಕೊಂಡಿದ್ದಾರೆ ಆದರೆ ಈತನು 18 ವರ್ಷಗಳಿಂದ ಕಂಪನಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇರಲಿ ಕೆಲಸ ಮಾಡಿಕೊಂಡು ಬರುತ್ತಿದ್ದರು ಸಹ ಈತನನ್ನು ಕಾಯಂ ನೌಕರನಾಗಿ ಮಾಡಬೇಕಾಗುತ್ತದೆ ಎಂದು ಆತನಿಗೆ ಒಂದು ವರ್ಷ ಎರಡು ವರ್ಷ ಟ್ರೈನಿಂಗ್ ಲೆಟರ್ ನೀಡಿ ಮತ್ತೆ ಆತನ ಕೆಲಸದಿಂದ ನಿಲ್ಲಿಸಿ ಮತ್ತೆ ತೆಗೆದುಕೊಳ್ಳುವ ರೀತಿಯಲ್ಲಿ ಕಳೆದ 18 ವರ್ಷಗಳಿಂದಲೂ ಸಹ ಕಂಪನಿಯವರು ಈ ರೀತಿ ಮಾಡಿಕೊಂಡು ಬರುತ್ತಿದ್ದು ಈ ಬಗ್ಗೆ ಗ್ರಾಮದ ಕಾಂಗ್ರೆಸ್ ಮುಖಂಡ ರವಿಗೌಡ ರವರು ಈ ಹಿಂದೆ ಈ ವಿಚಾರವಾಗಿ ಕಂಪನಿ ಆಡಳಿತ ಮಂಡಳಿ ಜೊತೆ ಮಾತುಕತೆ ನೆಡಿಸಿ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಅವರಿಗೆ ಕಾಯೋದ್ಯೋಗ ನೀಡುವುದಾಗಿ ಭರವಸೆ ನೀಡಿದರು ಆದರೆ ಈಗ ಗ್ರಾಮದ ಬಡ ಕುಟುಂಬದ ಮಹೇಶ್ ನೌಕರನನ್ನು ಏಕಏಕಿ ನಿಲ್ಲಿಸಿರುವುದು ಖಂಡನೀಯ ಮತ್ತೆ ಈತನನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಕಾಯಮು ಉದ್ಯೋಗ ನೀಡಬೇಕೆಂದು ಒತ್ತಾಯ ಮಾಡಿರುವ ರವಿಗೌಡರು
ಒಂದು ವೇಳೆ ಕೆಲಸ ನೀಡಲು ನಿರಾಕರಿಸಿದರೆ ನೌಕರರ ಬೆಂಬಲಕ್ಕೆ ರೈತ ಸಂಘದ ಜೊತೆಗೂಡಿ ಗ್ರಾಮಸ್ಥರು ಮುಖಂಡರು ಕಂಪನಿಯ ಮುಂದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಮುಖಂಡರು ಹೋರಾಟಕ್ಕೆ ಆಸ್ಪದ ನೀಡದೆ ನಿಲ್ಲಿಸಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಕಾಯಂ ಉದ್ಯೋಗ ನೀಡುವಂತೆ ಮುಖಂಡರು ಮನವಿ ಮಾಡಿದರು
ಈ ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರು ಕಾಂಗ್ರೆಸ್ ಮುಖಂಡರು ಆದ ರವಿಗೌಡ, ಕಡಕೊಳ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಬೀರೇಶ್, ಮುಖಂಡರಾದ ಕೆ ಎಸ್. ಚಂದ್ರು, ಪೈಲ್ವಾನ್ ರಮೇಶ್, ಮುಖಂಡರಾದ ಝಮೀರ್ ಅಹಮದ್, ಯಜಮಾನರಾದ ತೇರ್ತಿಗೌಡರು, ನಾಗಣ್ಣ ಕರಿಯಪ್ಪ, ರೈತ ಸಂಘದ ಮುಖಂಡ ಇಮ್ಮಾವುರಘು. ಟಗರು ರವಿ ಹಾಗೂ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು
