ತಾಳಿಕೋಟಿ, ಜು. 11: ರಿಲಯನ್ಸ್ ಪ್ರೈವೇಟ್ ಐಟಿಐ, ತಾಳಿಕೋಟಿ ವತಿಯಿಂದ Placement Keepers – People Pulse Pvt. Ltd. ಸಹಯೋಗದಲ್ಲಿ 2026ರ ಜುಲೈ 13, ಸೋಮವಾರ ಬೆಳಿಗ್ಗೆ 11:00 ಗಂಟೆಯಿಂದ ಬೃಹತ್ ಕ್ಯಾಂಪಸ್ ಡ್ರೈವ್ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಟಾಟಾ, ಕಿಯಾ ಮೋಟಾರ್ಸ್, ರಿವರ್ ಮೊಬಿಲಿಟಿ, ಟಾಫೆ (TAFE), ಟಿವಿಎಸ್ ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ.
ಐಟಿಐ (ಎಲ್ಲಾ ಟ್ರೇಡ್‌ಗಳು) ಉತ್ತೀರ್ಣ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕ್ಯಾಂಪಸ್ ಡ್ರೈವ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರೊಡಕ್ಷನ್ ಆಪರೇಟರ್, ಹೆಲ್ಪರ್/ಅಪ್ರೆಂಟಿಸ್ ಟ್ರೈನಿ, ಎಲೆಕ್ಟ್ರಾನಿಕ್ಸ್ ಮೆಕಾನಿಕ್, ಅಸೆಂಬ್ಲಿ ಆಪರೇಟರ್ ಹಾಗೂ ಜೂನಿಯರ್ ಟೆಕ್ನೀಷಿಯನ್ ಹುದ್ದೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಮಾಸಿಕ ₹16,000 ರಿಂದ ₹20,000 ವೇತನದ ಜೊತೆಗೆ ಆಹಾರ, ಸಾರಿಗೆ ಹಾಗೂ ವಸತಿ ಸೌಲಭ್ಯ ಒದಗಿಸಲಾಗುತ್ತದೆ.
ಈ ಕ್ಯಾಂಪಸ್ ಡ್ರೈವ್ ರಿಲಯನ್ಸ್ ಪ್ರೈವೇಟ್ ಐಟಿಐ ಕಾಲೇಜು, ತಾಳಿಕೋಟಿ ಆವರಣದಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 8088580071, 6364915696, 9620306543, 9740432177.
