ಮಸ್ಕಿ: ಶಿವಮೊಗ್ಗ ರಂಗಾಯಣದರು ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಸ್ಕಿ, ಪ್ರತಾಪ್ ಗೌಡ ಫೌಂಡೇಶನ್ , ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರ ಸಂಘ ಮಸ್ಕಿ ಸಂಯುಕ್ತಾಶ್ರಯದಲ್ಲಿ. “ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನವು ಜುಲೈ .13ರಂದು ಸೋಮವಾರ ಸಂಜೆ 6.30 ಗಂಟೆಗೆ ಮಸ್ಕಿ ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಶ್ರೀಮತಿ ವಿದ್ಯಾವತಿ ವನಕಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರು ಮಸ್ಕಿ ಅವರು ತಿಳಿಸಿದ್ದಾರೆ.

ಶಿವಮೊಗ್ಗ ರಂಗಾಯಣದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರ ಮಹಮ್ಮದ್ ಕುಂಞ ಅವರ ಕಾದಂಬರಿಯ ರಂಗರೂಪ, ನಟರಾಜ್ ಹೊನ್ನವಳ್ಳಿ ಅವರ ನಿರ್ದೇಶನದ ರಾಘವ ಕಮ್ಮಾರ ಇವರ ಸಂಗೀತದ, ರಂಗಾಯಣ, ಶಿವಮೊಗ್ಗ ಪ್ರಸ್ತುತಿಯ ಈ ನಾಟಕ ಪ್ರದರ್ಶನಕ್ಕೆ ಸಾರ್ವಜನಕರಿಗೆ ಪ್ರವೇಶ ಉಚಿತವಿದ್ದು, ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕ ವೀಕ್ಷಿಸಬೇಕೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *