ರಾಯಚೂರು -: ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಇರುವ ಶೌಚಾಲಯದ ಅವ್ಯವಹಾರ ಹಾಗೂ ಅವ್ಯವಸ್ಥೆ ಸರಿಪಡಿಸಲು ಸಾಮಾಜಿಕ ಕಾರ್ಯಕರ್ತ ಆ.ಮ ನಡುಮನಿ ಜಿಲ್ಲೆಗೆ ಆಗಮಿಸಿದ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರಿಗೆ ಮನವಿ ಸಲ್ಲಿಸಿದರು.

ಬಸ್ ನಿಲ್ದಾಣದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು ಶೌಚಾಲಯಕ್ಕೆ ಕೇವಲ 3 ರೂಪಾಯಿ ಮತ್ತು ಮೂತ್ರಾಲಯ ಉಚಿತವಾಗಿ ಇದೆ ಎಂದು ಬೋರ್ಡ್ ಹಾಕಿದ್ದರು ಸಹ, ಇಲ್ಲಿ ನಿರ್ವಹಣೆ ಮಾಡುವವರು ಪ್ರತಿಯೊಬ್ಬ ಪ್ರಯಾಣಿಕರಿಂದ 10 ರೂಪಾಯಿ ಪಡೆಯುತ್ತಿದ್ದಾರೆ. ಮೂತ್ರ ವಿಸರ್ಜನೆ ಉಚಿತವಾಗಿ ಇದ್ದರೂ ಕೂಡ ಮಹಿಳಾ ಪ್ರಯಾಣಿಕರಿಂದ 10 ರೂಪಾಯಿ ಪಡೆಯುತ್ತಿದ್ದಾರೆ.

ಇದು ಪ್ರತಿದಿನ ಹಗಲು ರಾತ್ರಿ ಅವ್ಯವಹತವಾಗಿ ನಡೆಯುತ್ತಿದೆ, ಅಲ್ಲದೇ ಮಹಿಳೆಯರ ಶೌಚಾಲಯ ಕೋಣೆಗಳನ್ನು ನಿರ್ವಹಣೆ ಮಾಡುವವರು ಪುರುಷರು ಇರುತ್ತಾರೆ, ಕಡ್ಡಾಯವಾಗಿ ಮಹಿಳೆಯರೇ ಇರಬೇಕೆಂದು ಟೆಂಡರ್ ನಿಯಮವಿದೆ. ಮಹಿಳಾ ಶೌಚಾಲಯ ಕೋಣೆಗೆ ಸ್ವಚ್ಛತಾ ನೆಪದಲ್ಲಿ ಗಂಟೆಗೊಮ್ಮೆ ಒಳಗೆ ಪ್ರವೇಶ ಮಾಡುತ್ತಾರೆ ಇದರಿಂದ ಮಹಿಳೆಯರಿಗೆ ಮುಜುಗರವಾಗುತ್ತಿದೆ.

ಇದರ ಬಗ್ಗೆ ಸಾರಿಗೆ ನಿಗಮದ ಅಧಿಕಾರಿಗಳ ಕಣ್ಣಿಗೆ ಬಿದ್ದರೂ ಸಹ ಯಾವುದೇ ಕ್ರಮ ಜರುಗಿಸದೇ ಮೌನಕ್ಕೆ ಶರಣಾಗಿದ್ದಾರೆ. ಆದ್ದರಿಂದ ಈ ಮೂಲಕ ತಮಗೆ ದೂರು ಕೊಡಲಾಗುತ್ತಿದೆ, ಸದ್ರಿಯವರು ಪದೇ ಪದೇ ಟೆಂಡರ್ ನಿಯಮದ ಆದೇಶ ಉಲ್ಲಂಘನೇ ಮಾಡುತ್ತಿರುವ ವಿಷಯಯವನ್ನು ಗಂಭೀರವಾಗಿ ಪರಿಗಣಿಸಿ ನಾಗರೀಕರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಸದ್ರಿಯವರ ಟೆಂಡರ್ ರದ್ದುಗೊಳಿಸಬೇಕು. ಈ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *