ಹಾಲಾಪೂರ: ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನದ ಅಂಗವಾಗಿ ಡಿ ಎಸ್ ಪಿ ಚಂದ್ರಶೇಖರ ನಾಯಕ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಮಾತನಾಡಿ ಪ್ರತಿವರ್ಷ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನವನ್ನಾಗಿ ಆಚರಿಸುತ್ತವೆ, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಹಾವಳಿಯಿಂದ ಯುವಕರು ಚಿಕ್ಕ ವಯಸ್ಸಿನಲ್ಲೇ ಅನೇಕ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದು ಅದರಿಂದ ಸಮಾಜಕ್ಕೆ ಮತ್ತು ಕುಟುಂಬಕ್ಕೆ ದೊಡ್ಡ ಆಘಾತವಾಗಿದ್ದು, ಅದಕ್ಕೆ ಪ್ರತಿವರ್ಷ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಸಂದೇಶವನ್ನು ಕೊಡುವುದಕ್ಕಾಗಿ ಈ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದು ಅದಕ್ಕೆ ನೀವು ಮಾದಕ ವಸ್ತುಗಳಿಂದ ದೂರವಿರಿ,ಇದರಿಂದ ಹಾನಿಗಳೆಂದರೆ ಆರೋಗ್ಯ ಹಾನಿ,ಮಾನಸಿಕ ಖಿನ್ನತೆ ,ಸಾಮಾಜಿಕ ಹಿನ್ನಡೆ ಹೀಗೆ ಅನೇಕ ಸಮಸ್ಯೆಗಳಿಂದ ಇಡಿ ಜೀವನವೇ ಬಲಿಪಶುವಾಗುತ್ತದೆ. ಅದಕ್ಕೆ ಅವುಗಳಿಂದ ದೂರವಿದ್ದು ಉತ್ತಮ ನಾಗರಿಕರಾಗಿ ಜೀವನ ಸಾಗಿಸಿ ಎಂದು ಹೇಳಿದರು. ಈ ವೇಳೆಯಲ್ಲಿ ಪಿಎಸ್ಐ ಗುರುಚಂದ್ರ ಯಾದವ, ಮುಖ್ಯಗುರು ಸುಭಾಷ್ ಸಿಂಗ್ ಹಾಗೂ ಶಿಕ್ಷಕವೃಂದದವರು ಇದ್ದರು.

